ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಅಂಕ: ಶಿಕ್ಷಕ ಮತ್ತು ಗುಮಾಸ್ತರನ್ನು ಮರಕ್ಕೆ ಕಟ್ಟಿ ಥಳಿಸಿದ ವಿದ್ಯಾರ್ಥಿಗಳು

Last Updated 30 ಆಗಸ್ಟ್ 2022, 11:40 IST
ಅಕ್ಷರ ಗಾತ್ರ

ದುಮ್ಕಾ: ಕಡಿಮೆ ಅಂಕ ನೀಡಿದ್ದಾರೆಂಬ ಕಾರಣಕ್ಕೆ ಶಿಕ್ಷಕರು ಮತ್ತು ಗುಮಾಸ್ತರನ್ನು ಮರಕ್ಕೆ ಕಟ್ಟಿ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಘಟನೆ ಜಾರ್ಖಂಡ್‌ನ ದುಮ್ಕಾ ಪಟ್ಟಣದಲ್ಲಿ ನಡೆದಿದೆ.

ಪ್ರಾಕ್ಟಿಕಲ್‌ನಲ್ಲಿ ಕಡಿಮೆ ಅಂಕ ನೀಡಿದ್ದಾರೆ ಎಂದು ಆರೋಪಿಸಿ 9ನೇ ತರಗತಿಯ ವಿದ್ಯಾರ್ಥಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದುಮ್ಕಾ ಜಿಲ್ಲೆಯ ಗೋಪಿಕಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರ ನಡೆಸುತ್ತಿರುವ ಪರಿಶಿಷ್ಟ ಪಂಗಡದ ವಸತಿ ಶಾಲೆಯಲ್ಲಿ ಸೋಮವಾರ ಈ ಘಟನೆ ನಡೆದಿದೆ.

ಶನಿವಾರ ಜಾರ್ಖಂಡ್ ಅಕಾಡೆಮಿ ಪರಿಷತ್ತು ಪ್ರಕಟಿಸಿದ ಫಲಿತಾಂಶದಲ್ಲಿ 9ನೇ ತರಗತಿಯ 32 ವಿದ್ಯಾರ್ಥಿಗಳ ಪೈಕಿ 11 ಮಂದಿಗೆ ಅನುತ್ತೀರ್ಣ ಎಂದು ಪರಿಗಣಿಸಲಾಗುವ ಡಿಡಿ(ಡಬಲ್ ಡಿ) ಗ್ರೇಡ್ ನೀಡಲಾಗಿದೆ ಎಂದು ತೀಲಿದುಬಂದಿದೆ.

‘ಘಟನೆ ಕುರಿತಂತೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿ ಲಿಖಿತ ದೂರು ನೀಡಿಲ್ಲ ಘಟನೆ ಬಗ್ಗೆ ಪರಿಶೀಲಿಸಿದ ಬಳಿಕ ಶಾಲಾ ಆಡಳಿತ ಮಂಡಳಿಗೆ ದೂರು ದಾಖಲಿಸುವಂತೆ ಸೂಚಿಸಿದೆ. ಆದರೆ, ಈ ಪ್ರಕರಣ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಬಹುದೆಂಬ ಕಾರಣಕ್ಕೆ ದೂರು ನೀಡಲು ಅವರು ನಿರಾಕರಿಸಿದ್ದಾರೆ’ಎಂದು ಗೋಪಿಕಂದರ್ ಪೊಲೀಸ್ ಠಾಣೆ ಠಾಣಾಧಿಕಾರಿ ನಿತ್ಯಾನಂದ ಭಕ್ತ ಹೇಳಿದ್ದಾರೆ.

ಹಲ್ಲೆಒಳಗಾದ ಶಿಕ್ಷಕನನ್ನು ಸುಮನ್ ಕುಮಾರ್, ಗುಮಾಸ್ತ ಸೋನೆರಾಮ್ ಚೌರೆ ಎಂದು ಗುರುತಿಸಲಾಗಿದೆ. ಅವರೂ ಸಹ ಯಾವುದೇ ಲಿಖಿತ ದೂರು ನೀಡಿಲ್ಲ ಎಂದು ಪೊಲಿಸರು ಹೇಳಿದ್ದಾರೆ.

ವಸತಿ ಶಾಲೆಯಲ್ಲಿ ಸುಮಾರು 200 ವಿದ್ಯಾರ್ಥಿಗಳಿದ್ದು, ಬಹುತೇಕರು ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರ ಜೊತೆ ಶಾಲೆಗೆ ಭೇಟಿ ನೀಡಿದ್ದ ಗೋಪಿಕಂದರ್ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಅನಂತ್ ಝಾ ಹೇಳಿದ್ದಾರೆ.

‘ಹಲ್ಲೆಗೊಳಗಾಗಿರುವ ಶಿಕ್ಷಕ ಈ ಹಿಂದೆ ಮುಖ್ಯೋಪಾಧ್ಯಾಯರಾಗಿದ್ದರು. ಬಳಿಕ, ಅವರನ್ನು ಹುದ್ದೆಯಿಂದ ಕೆಳಗಿಸಲಾಗಿದ್ದು, ಅದರ ಕಾರಣ ತಿಳಿದುಬಂದಿಲ್ಲ. ಇದು ಶಿಕ್ಷಕರ ನಡುವಿನ ದ್ವೇಷದ ಪ್ರಕರಣವಾಗಿರಬಹುದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಶಾಲೆಗೆ ಎರಡು ದಿನ ರಜೆ ನೀಡಲಾಗಿದ್ದು, ಮಕ್ಕಳನ್ನು ಅವರವರ ಮನೆಗೆ ಕಳುಹಿಸಲಾಗಿದೆ’ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.


ಶಿಕ್ಷಕರು ತಮಗೆ ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ ಅನುತ್ತೀರ್ಣ ಆಗುವಷ್ಟು ಅಂಕ ನೀಡಿದ್ದಾರೆ. ಜೆಎಸಿ ವೆಬ್‌ಸೈಟ್‌ಗೆ ಅಂಕಗಳನ್ನು ಅಪ್ಲೋಡ್ ಮಾಡಿದ ಹೊಣೆ ಗುಮಾಸ್ತನದ್ದಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.


‘ಪ್ರಾಕ್ಟಿಕಲ್ ಪರೀಕ್ಷೆಯ ಅಂಕಗಳು ಮತ್ತು ಆನ್‌ಲೈನ್ ಅಪ್ಲೋಡ್ ಆದ ದಿನಾಂಕವನ್ನು ಬಹಿರಂಗಪಡಿಸುವಲ್ಲಿ ಶಾಲಾ ಆಡಳಿತ ಮಂಡಳಿ ವಿಫಲವಾಗಿದೆ. ವಿದ್ಯಾರ್ಥಿಗಳು ಥಿಯರಿ ಅಥವಾ ಪ್ರಾಕ್ಟಿಕಲ್ ಪೇಪರ್‌ ಯಾವುದರಲ್ಲಿ ಅನುತ್ತೀರ್ಣರಾಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ವದಂತಿಯನ್ನು ನಂಬಿ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT