ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯದಲ್ಲಿ ಮಹಿಳೆಯರ ವಿಡಿಯೊ ಚಿತ್ರೀಕರಿಸುತ್ತಿದ್ದ ಶಿಕ್ಷಕನ ಬಂಧನ

Published 31 ಜನವರಿ 2024, 3:20 IST
Last Updated 31 ಜನವರಿ 2024, 3:20 IST
ಅಕ್ಷರ ಗಾತ್ರ

ನಾಗ್ಪುರ: ನಾಗ್ಪುರ ನಗರದ ಕೈಗಾರಿಕಾ ಎಕ್ಸ್‌ಪೊ ಸಂದರ್ಭ ಶೌಚಾಲಯದಲ್ಲಿ ಮಹಿಳೆಯರ ವಿಡಿಯೊ ಚಿತ್ರೀಕರಿಸುತ್ತಿದ್ದ ಶಿಕ್ಷಕನನ್ನು ಬಂಧಿಸಲಾಗಿದೆ.

ಬಂಧಿತನನ್ನು ನಾಗ್ಪುರದ ಕಸರ್‌ಪುರದ ನಿವಾಸಿ 37 ವರ್ಷದ ಮಂಗೇಶ್ ವಿನಾಯಕ್ ರಾವ್ ಖರ್ಪೆ ಎಂದು ಗುರುತಿಸಲಾಗಿದೆ. ಶೌಚಾಲಯದ ಕಿಟಕಿ ಮೂಲಕ ಮಹಿಳೆಯರ ವಿಡಿಯೊ ಚಿತ್ರೀಕರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿಯೊಬ್ಬ ವಿಡಿಯೊ ಚಿತ್ರೀಕರಿಸುತ್ತಿದ್ದ ಬಗ್ಗೆ ಮಹಿಳೆಯೊಬ್ಬರು ಸಂಘಟಕರಿಗೆ ದೂರು ನೀಡಿದ್ದರು. ಬಳಿಕ, ತನಿಖೆ ನಡೆಸಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ನಗರದ ಪ್ರತಿಷ್ಠಿತ ಕಾಲೇಜಿನ ಕಲಾ ಶಿಕ್ಷಕನಾಗಿದ್ದು, ಫೆಸ್ಟಿವಲ್ ಗೇಟ್ ಅಲಂಕಾರಕ್ಕೆ ನಿಯೋಜಿಸಲಾಗಿತ್ತು.

ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ ಅಂಬಜಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿನಾಯಕ್ ಗೊಲ್ಹೆ ಮತ್ತು ಅವರ ತಂಡ ಆರೋಪಿಯನ್ನು ಪತ್ತೆ ಮಾಡಿದೆ.

ಎಕ್ಸ್ ಪೋ ಸಿದ್ಧತೆಯಲ್ಲಿ 4 ದಿನಗಳಿಂದ ಈತ ತೊಡಗಿಸಿಕೊಂಡಿದ್ದ ಎಂದು ವರದಿ ತಿಳಿಸಿದೆ.

ಪೊಲೀಸರು ವಶಪಡಿಸಿಕೊಂಡ ಮೊಬೈಲ್‌ನಲ್ಲಿ ಹತ್ತಾರು ಮಹಿಳೆಯರ ವಿಡಿಯೊಗಳು ಪತ್ತೆಯಾಗಿದ್ದು, ಕೆಲವನ್ನು ಡಿಲೀಟ್ ಮಾಡಲಾಗಿದೆ ಎಂದು ಪರಿಶೀಲನೆ ವೇಳೆ ತಿಳಿದು ಬಂದಿದೆ.

ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT