ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರ: ಗಡಿ ನಿಯಂತ್ರಣ ರೇಖೆ ಬಳಿ ಉಗ್ರರ ಅಡಗುದಾಣಗಳು ಸಕ್ರಿಯ

Last Updated 19 ಏಪ್ರಿಲ್ 2022, 12:52 IST
ಅಕ್ಷರ ಗಾತ್ರ

ಶ್ರೀನಗರ: ಕಾಶ್ಮೀರ ಕಣಿವೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಭಯೋತ್ಪಾದಕರ ಅಡಗುದಾಣಗಳು ಸಕ್ರಿಯವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 60ರಿಂದ 80 ಭಯೋತ್ಪಾದಕರು ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಂತೆ ಇರುವ ಅಡಗುದಾಣಗಳಲ್ಲಿದ್ದಾರೆ. ಇವರಲ್ಲಿ ಅಫ್ಗಾನಿಸ್ತಾನದಿಂದ ಹಿಂತಿರುಗಿದವರೂ ಸಹ ಇದ್ದಾರೆ ಎಂದು ತಿಳಿಯಲಾಗಿದೆ. ಇವರನ್ನು ಬೇಸಿಗೆಯಲ್ಲಿ ಗಡಿ ನುಸುಳಿಸಲು ಪಾಕಿಸ್ತಾನ ಯತ್ನಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಯೋತ್ಪಾದಕರನ್ನು ಭಾರತದ ಒಳಕ್ಕೆ ನುಸುಳಲು ಬಿಡುವ ಮುನ್ನ ಪಾಕಿಸ್ತಾನ ಹಲವು ಬಾರಿ ಚಿಂತಿಸಬೇಕಾಗಬಹುದು. ಯಾಕೆಂದರೆ,ಆ ದೇಶವು ಈಗಾಗಲೇ ಅಂತರರಾಷ್ಟ್ರೀಯ ಸಂಸ್ಥೆ ಹಣಕಾಸು ನಿಗಾ ಕಾರ್ಯಪಡೆಯ (ಎಫ್‌ಎಟಿಎಫ್‌) ‘ಬೂದು ಪಟ್ಟಿ’ಯಲ್ಲಿ ಇದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಫೆಬ್ರುವರಿಯಿಂದ ಎಲ್‌ಒಸಿಯಲ್ಲಿ ಕದನ ವಿರಾಮ ಜಾರಿಯಲ್ಲಿದೆ. ಈ ಸಂದರ್ಭವನ್ನು ತನ್ನ ಬಲವರ್ಧನೆಗೆ ಪಾಕಿಸ್ತಾನ ಸೇನೆ ಬಳಸಿಕೊಳ್ಳುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT