ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯನಿಗೆ ಆರ್ಘ್ಯ ಅರ್ಪಿಸಿದ ಪ್ರಧಾನಿ

Published 1 ಜೂನ್ 2024, 0:32 IST
Last Updated 1 ಜೂನ್ 2024, 0:32 IST
ಅಕ್ಷರ ಗಾತ್ರ

ಕನ್ಯಾಕುಮಾರಿ: ಇಲ್ಲಿನ ವಿವೇಕಾನಂದ ಸ್ಮಾರಕದಲ್ಲಿ ಗುರುವಾರ ಸಂಜೆ ಧ್ಯಾನ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಶುಕ್ರವಾರ ಬೆಳಿಗ್ಗೆ ಸೂರ್ಯನಿಗೆ ಅರ್ಘ್ಯ ಸಮರ್ಪಣೆ ಮಾಡಿದರು. ಜೊತೆಗೆ ಎರಡೂ ಕೈಗಳನ್ನು ಜೋಡಿಸಿ, ನಮಸ್ಕಾರ ಮಾಡಿದರು. 

ಧ್ಯಾನ ಮಂಟಪದಲ್ಲಿ ಕೇಸರಿ ಬಣ್ಣದ ಅಂಗಿ, ಶಾಲು ಮತ್ತು ಧೋತಿಯಲ್ಲಿರುವ ಚಿತ್ರಗಳನ್ನು ಸಹ ಬಿಜೆಪಿಯು ‘ಎಕ್ಸ್’ ಖಾತೆ ಸೇರಿದಂತೆ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. 

‘ಅದೆಷ್ಟು ದೃಷ್ಟಿಕೋನಗಳು! ಅದೆಷ್ಟು ವಿಡಿಯೊಗಳು! ಸ್ವಾಮಿ ವಿವೇಕಾನಂದ ಮೌನವಾಗಿ ಇದ್ದಾರೆ’  ಪ್ರಧಾನಿ ಮೋದಿ ಅವರು ಧ್ಯಾನ ಮಾಡುತ್ತಿರುವ ವಿಡಿಯೊ ಮತ್ತು ಚಿತ್ರಗಳನ್ನು ಪೋಸ್ಟ್ ಮಾಡಿದ ಬಿಜೆಪಿಗೆ ತಮಿಳುನಾಡು ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ. ಸೆಲ್ವಪೆರುಂಥಗೈ ಅವರು ಈ ರೀತಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT