ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಪುರಾ: ಬಾಂಗ್ಲಾದೇಶದ 23 ಸ್ಮಗ್ಲರ್‌ಗಳ ಸೆರೆ, 6,000 ಕೆ.ಜಿ ಸಕ್ಕರೆ ಜಪ್ತಿ

Published 6 ಫೆಬ್ರುವರಿ 2024, 16:37 IST
Last Updated 6 ಫೆಬ್ರುವರಿ 2024, 16:37 IST
ಅಕ್ಷರ ಗಾತ್ರ

ಅಗರ್ತಲಾ: ತ್ರಿಪುರಾದ ಸಮರಗಂಜ್‌ ಜಿಲ್ಲೆಯಲ್ಲಿ 12 ಕಳ್ಳಸಾಗಣೆದಾರರನ್ನು ಬಿಎಸ್‌ಎಫ್ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ, 6,000 ಕೆ.ಜಿ ಸಕ್ಕರೆ ಮತ್ತು 17 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

‘ಗಡಿಯಲ್ಲಿ ಕಳ್ಳಸಾಗಣೆ ಕುರಿತಂತೆ ಖಚಿತ ಮಾಹಿತಿ ಮೇರೆಗೆ ಸಮರಗಂಜ್‌ನಲ್ಲಿ ಕಾದು ಕುಳಿತಿದ್ದ ಯೋಧರು, ಬಾಂಗ್ಲಾದೇಶದ 23 ಸ್ಮಗ್ಲರ್‌ಗಳನ್ನು ಬಂಧಿಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

30 ಮಂದಿಯ ಕಳ್ಳಸಾಗಣೆದಾರರ ಗುಂಪು ಹಲವು ಸಣ್ಣ ಗುಂಪುಗಳಾಗಿ ವಿಂಗಡಣೆಯಾಗಿ ಭಾರತದಿಂದ ಬರುತ್ತಿದ್ದ ಸರಕನ್ನು ಸ್ವೀಕರಿಸಲು ಅಂತರರಾಷ್ಟ್ರೀಯ ಗಡಿಯನ್ನು ದಾಟಿದ್ದರು ಎಂದೂ ಅವರು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ತ್ರಿಪುರಾದ ಭಾರತ–ಬಾಂಗ್ಲಾದೇಶ ಗಡಿಯಲ್ಲಿ ಸಕ್ಕರೆ ಕಳ್ಳಸಾಗಣೆ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ.

2023ರಲ್ಲಿ 16 ಸ್ಮಗ್ಲರ್‌ಗಳನ್ನು ಬಂಧಿಸಲಾಗಿದ್ದು, 5.49 ಲಕ್ಷ ಕೆ.ಜಿ ಸಕ್ಕರೆ ಜಪ್ತಿ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT