ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ದಿನದಲ್ಲಿ ಮೋದಿ ಸರ್ಕಾರ ಸೇರಲಿರುವ ಉದ್ಧವ್: ರವಿ ರಾಣಾ

Published 3 ಜೂನ್ 2024, 16:18 IST
Last Updated 3 ಜೂನ್ 2024, 16:18 IST
ಅಕ್ಷರ ಗಾತ್ರ

ಅಮರಾವತಿ (ಮಹಾರಾಷ್ಟ್ರ): ಶಿವಸೇನಾ (ಯುಬಿಟಿ) ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದ 15 ದಿನದಲ್ಲಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಸೇರಲಿದ್ದಾರೆ ಎಂದು ಅಮರಾವತಿ ಶಾಸಕ ರವಿ ರಾಣಾ ಮಂಗಳವಾರ ಹೇಳಿದ್ದಾರೆ. ಮುಂದೆ ಬರಲಿರುವುದು ಮೋದಿ ಯುಗ ಎಂದು ಅವರು ಪ್ರತಿಪಾದಿಸಿದರು.

ಜೂನ್ 4ರಂದು ಮಹಾ ವಿಕಾಸ ಅಘಾಡಿ (ಎಂವಿಎ) ಮುಖಂಡರ ಆರೋಗ್ಯ ಏರುಪೇರಾಗಲಿದ್ದು, ಅವರು ರಕ್ತದೊತ್ತಡ ಪರೀಕ್ಷೆ ಮಾಡುವ ಸಾಧನ ಮತ್ತು ವೈದ್ಯರನ್ನು ತಮ್ಮ ಬಳಿ ಇಟ್ಟುಕೊಳ್ಳುಬೇಕಿದೆ ಎಂದು ಹೇಳಿದರು.

ರವಿ ರಾಣಾ ಪತ್ನಿ ನವನೀತ್ ರಾಣಾ ಅಮರಾವತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT