ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳಕು ಸೀಟ್, ಬೇಯಿಸದ ಆಹಾರ, AI ಬ್ಯುಸಿನೆಸ್ ಕ್ಲಾಸ್ ದುಃಸ್ವಪ್ನ: ಪ್ರಯಾಣಿಕ

Published 17 ಜೂನ್ 2024, 4:28 IST
Last Updated 17 ಜೂನ್ 2024, 4:28 IST
ಅಕ್ಷರ ಗಾತ್ರ

ಮುಂಬೈ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಬೇಯಿಸದ ಆಹಾರ, ಕೊಳಕು ಸೀಟನ್ನು ನೀಡಿದ್ದ ಬಗ್ಗೆ ಪ್ರಯಾಣಿಕರೊಬ್ಬರು ಹೇಳಿಕೊಂಡಿದ್ದಾರೆ.

ಪ್ರಯಾಣಿಕ ವಿನೀತ್ ಕೆ ಎಂಬವರು ಎಕ್ಸ್‌ ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಎತಿಹಾಡ್ ಏರ್‌ಲೈನ್ಸ್‌ನಲ್ಲಿ ಅಗ್ಗದ ದರದಲ್ಲಿ ಟಿಕೆಟ್ ಸಿಗುತ್ತಿದ್ದರೂ ಸಹ ನ್ಯೂಯಾರ್ಕ್‌ಗೆ ನಾನ್‌ಸ್ಟಾಪ್ ವಿಮಾನವಿದೆ ಎಂಬ ಕಾರಣಕ್ಕೆ ಏರ್ ಇಂಡಿಯಾದಲ್ಲಿ ಟಿಕೆಟ್ ಖರೀದಿಸಿ ದೆಹಲಿಯಿಂದ ನ್ಯೂಯಾರ್ಕ್ ಪ್ರಯಾಣಿಸಿದೆ ಎಂದಿದ್ದಾರೆ.

'ನಿನ್ನೆ ನನ್ನ ವಿಮಾನದ ಪ್ರಯಾಣವು ದುಃಸ್ವಪ್ನವಾಗಿತ್ತು..ನಾನು ಬುಕ್ ಮಾಡಿದ್ದ ಬಿಸಿನೆಸ್ ಕ್ಲಾಸ್ ಸೀಟುಗಳು ಸ್ವಚ್ಛವಾಗಿರಲಿಲ್ಲ, ಅಲ್ಲದೆ, ಸೀಟ್ ಕವರ್ ಹಾಳಾಗಿದ್ದವು. 35ರಲ್ಲಿ ಕನಿಷ್ಠ 5 ಆಸನಗಳು ಸರಿಯಾಗಿರಲಿಲ್ಲ’ಎಂದು ಅವರು ಹೇಳಿದ್ದಾರೆ.

25 ನಿಮಿಷಗಳ ವಿಳಂಬದ ನಂತರ ಫ್ಲೈಟ್ ಟೇಕ್ ಆಫ್ ಆಗಿದೆ ಎಂದು ಆರೋಪಿಸಿದ ವಿನೀತ್, ‘ಟೇಕ್ ಆಫ್ ಆದ 30 ನಿಮಿಷಗಳ ನಂತರ ನಾನು ಮಲಗಲು ಬಯಸಿದ್ದೆ. ಆದರೆ, ನನ್ನ ಸೀಟ್ ಫ್ಲಾಟ್ ಬೆಡ್‌ಗೆ ಹೋಗಲಿಲ್ಲ. ಏಕೆಂದರೆ, ಅದು ಹಾಳಾಗಿದ್ದು ಕೆಲಸ ಮಾಡುತ್ತಿರಲಿಲ್ಲ’ ಎಂದಿದ್ದಾರೆ.

ಬಳಿಕ, ವಿನೀತ್ ಸೀಟು ಬದಲಾವಣೆಗೆ ಸಿಬ್ಬಂದಿಗೆ ವಿನಂತಿಸಿದ್ದು, ಇನ್ನೊಂದು ಸೀಟಿಗೆ ಅವರನ್ನು ಸ್ಥಳಾಂತರಿಸಿದ್ದಾರೆ.

ಕೆಲವು ಗಂಟೆಗಳ ನಂತರ ಎಚ್ಚರವಾದಾಗ ಆಹಾರ ನೀಡಲಾಯಿತು ಅದು ಬೆಂದಿರಲಿಲ್ಲ. ಹಣ್ಣುಗಳು ಹಳಸಿದ್ದವು. ವಿಮಾನದಲ್ಲಿದ್ದ ಎಲ್ಲರೂ ಅವುಗಳನ್ನು ಹಿಂದಿರುಗಿಸಿದರು ಎಂದಿದ್ದಾರೆ.

ಕೆಟ್ಟ ಆಹಾರ, ಕೊಳಕು ಸೀಟ್, ಹಾಳಾದ ಸೀಟ್ ಕವರ್, ಕೆಲಸ ಮಾಡದ ಟಿವಿ.. ಹೀಗೆ ಹಲವು ದೂರುಗಳನ್ನು ವಿನೀತ್ ಮುಂದಿಟ್ಟಿದ್ದಾರೆ. ಈ ಬಗ್ಗೆ ಏರ್ ಇಂಡಿಯಾ ಿನ್ನಷ್ಟೆ ಪ್ರತಿಕ್ರಿಯೆ ನೀಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT