ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶ ವಿಧಾನಪರಿಷತ್ ಚುನಾವಣೆ: ಎನ್‌ಡಿಎ 10, ಎಸ್‌ಪಿಯ ಮೂವರು ಆಯ್ಕೆ 

Published 14 ಮಾರ್ಚ್ 2024, 13:21 IST
Last Updated 14 ಮಾರ್ಚ್ 2024, 13:21 IST
ಅಕ್ಷರ ಗಾತ್ರ

ಲಖನೌ: ಉತ್ತರಪ್ರದೇಶ ವಿಧಾನ ಪರಿಷತ್ತಿಗೆ ಎನ್‌ಡಿಎ ಮೈತ್ರಿಕೂಟದಿಂದ 10 ಮತ್ತು ಸಮಾಜವಾದಿ ಪಕ್ಷದಿಂದ ಮೂವರು ಸೇರಿದಂತೆ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಹೇಂದ್ರ ಸಿಂಗ್, ಅಶೋಕ್ ಕಟಾರಿಯಾ, ವಿಜಯ್ ಬಹದ್ದೂರ್ ಪಾಠಕ್, ಸಂತೋಷ್ ಸಿಂಗ್, ಮೋಹಿತ್ ಬೆನಿವಾಲ್, ರಾಮ್ ಸಿಂಘಾಲ್ ಮತ್ತು ಧರ್ಮೇಂದ್ರ ಸಿಂಗ್ ಅವರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ.

ಎನ್‌ಡಿಎ ಮೈತ್ರಿಕೂಟದ ಆಶಿಶ್ ಪಟೇಲ್ (ಅಪ್ನಾ ದಳ–ಎಸ್), ಯೋಗೇಶ್ ಚೌಧರಿ (ರಾಷ್ಟ್ರೀಯ ಲೋಕ ದಳ), ವಿಚೆಲಾಲ್ ( ಎಸ್‌ಬಿಎಸ್‌ಪಿ) ಅವರು ಆಯ್ಕೆಯಾಗಿದ್ದಾರೆ.

ಸಮಾಜವಾದಿ ಪಕ್ಷದಿಂದ ಬಲರಾಮ್ ಯಾದವ್, ಗುಡ್ಡು ಜಮಾಲಿ ಮತ್ತು ಕಿರಣ್ ಕಶ್ಯಪ್ ಅವರು ಆಯ್ಕೆಯಾಗಿದ್ದಾರೆ. 

ಆಯ್ಕೆಯಾದ ಅಭ್ಯರ್ಥಿಗಳಿಗೆ ಇಂದೇ ಪ್ರಮಾಣಪತ್ರಗಳನ್ನು ಸಹ ನೀಡಲಾಯಿತು ಎಂದು ವಿಧಾನಸಭೆಯ ವಿಶೇಷ ಕಾರ್ಯದರ್ಶಿ ಬಿ. ಬಿ. ದುಬೆ ತಿಳಿಸಿದ್ದಾರೆ.

ಎನ್‌ಡಿಎ ಮೈತ್ರಿಕೂಟದಿಂದ 10 (ಇವರಲ್ಲಿ ಬಿಜೆಪಿ 7) ಹಾಗೂ ಸಮಾಜವಾದಿ ಪಕ್ಷದಿಂದ ಮೂವರು ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT