ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುಟಿಎಸ್’ ಅಪ್ಲಿಕೇಶನ್: ಟಿಕೆಟ್‌ ಬುಕಿಂಗ್‌ ನಿರ್ಬಂಧ ಸಡಿಲಿಸಿದ ಭಾರತೀಯ ರೈಲ್ವೆ

Last Updated 11 ನವೆಂಬರ್ 2022, 14:26 IST
ಅಕ್ಷರ ಗಾತ್ರ

ನವದೆಹಲಿ: ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆಯು ‘ಯುಟಿಎಸ್’ ಮೊಬೈಲ್ ಅಪ್ಲಿಕೇಶನ್ ಮೂಲಕ ಕಾಯ್ದಿರಿಸದೇ ಇರುವ ಟಿಕೆಟ್‌ಗಳನ್ನು ಕಾಯ್ದಿರಿಸುವ ದೂರದ ನಿರ್ಬಂಧವನ್ನು ಸಡಿಲಿಸಿದೆ.

ರೈಲ್ವೆ ಈಗ ಪ್ರಯಾಣಿಕರಿಗೆ ಯುಟಿಎಸ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಉಪನಗರವಲ್ಲದ ವಿಭಾಗಗಳಲ್ಲಿನ ನಿಲ್ದಾಣದಿಂದ 20 ಕಿ.ಮೀ ದೂರದವರೆಗೆ ಕಾಯ್ದಿರಿಸದ ಟಿಕೆಟ್‌ಗಳನ್ನು ಬುಕ್‌ ಮಾಡಲು ಅನುಮತಿಸುತ್ತದೆ. ಉಪನಗರ ಪ್ರದೇಶಗಳಲ್ಲಿ ದೂರವನ್ನು ಈಗಿರುವ 2 ಕಿ.ಮೀ.ನಿಂದ 5 ಕಿ.ಮೀ.ಗೆ ಹೆಚ್ಚಿಸಲಾಗಿದೆ.

ಕಾಯ್ದಿರಿಸದ ಟಿಕೆಟ್‌ಗಳನ್ನು ಮುಂಚಿತವಾಗಿ ಕಾಯ್ದಿರಿಸಲು ಸಾಧ್ಯವಾಗುವಂತೆ ದೂರ ಹೆಚ್ಚಿಸಲು ಈ ಹಿಂದೆ ಪ್ರಯಾಣಿಕರು ರೈಲ್ವೆಯನ್ನು ಒತ್ತಾಯಿಸಿದ್ದರು. ಕಾಯ್ದಿರಿಸದ ಟಿಕೆಟ್ ಹೊಂದಿರುವವರು ದೈನಂದಿನ ಪ್ರಯಾಣಿಕ ರೈಲುಗಳು ಅಥವಾ ದೂರದ ರೈಲುಗಳ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುತ್ತಾರೆ.

ಈ ಸಂಬಂಧ ರೈಲ್ವೆ ಮಂಡಳಿ ನವೆಂಬರ್ 7 ರಂದು ಎಲ್ಲಾ ವಲಯಗಳಿಗೆ ಹೊಸ ಸೂಚನೆಗಳನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT