ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ಮನೆಯಲ್ಲಿ ಕುಣಿಯುತ್ತಿದ್ದ ಯುವತಿ ನೃತ್ಯ ನಿಲ್ಲಿಸಿದ್ದಕ್ಕೆ ಗುಂಡು

Last Updated 6 ಡಿಸೆಂಬರ್ 2019, 8:31 IST
ಅಕ್ಷರ ಗಾತ್ರ

ಲಖನೌ:ಉತ್ತರ ಪ್ರದೇಶದ ಚಿತ್ರಕೂಟ್‌ನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಕುಣಿಯುತ್ತಿದ್ದ ಯುವತಿ ನೃತ್ಯನಿಲ್ಲಿಸಿದ್ದಕ್ಕೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ನಡೆದಿದೆ.

ಯುವತಿಗೆ ಗುಂಡೇಟು ಬಿದ್ದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಡಿಸೆಂಬರ್ 1ರಂದು ನಡೆದ ಘಟನೆ ಇದಾಗಿದೆ.

ಯುವತಿ ವೇದಿಕೆಯಲ್ಲಿ ಕುಣಿಯುತ್ತಿದ್ದಾಗ ಕುಡುಕನೊಬ್ಬ ಗೋಲಿ ಚಲ್ ಜಾಯೇಗಿ (ಗುಂಡು ಹಾರಿಸುವೆ ) ಎಂದು ಹೇಳುತ್ತಿರುವುದು ವಿಡಿಯೊದಲ್ಲಿದೆ. ಆಗ ಇನ್ನೊಬ್ಬ ವ್ಯಕ್ತಿ ಸುಧೀರ್ ಭಯ್ಯಾ ಆಪ್ ಗೋಲಿ ಚಲಾ ಹೀ ದೋ (ಸುಧೀರ್ ಅಣ್ಣ, ನೀವು ಗುಂಡು ಹಾರಿಸಿ) ಅಂತ ಹೇಳಿದ್ದಾರೆ. ನಂತರ ಯುವತಿ ಗುಂಡು ತಾಗಿ ಕೆಳಗೆ ಬೀಳುತ್ತಿರುವುದು ವಿಡಿಯೊ ದೃಶ್ಯದಲ್ಲಿದೆ.

ಸುಧೀರ್ ಸಿಂಗ್ ಪಟೇಲ್ ಅವರ ಮಗಳ ಮದುವೆ ಡಿಸೆಂಬರ್ 1ರಂದು ನಡೆದಿದ್ದು, ಈ ಮದುವೆಯಲ್ಲಿ ಕುಣಿಯುತ್ತಿದ್ದ ಯುವತಿಗೆ ಗುಂಡು ತಾಗಿದೆ.

ವರನ ಸೋದರ ಮಾವಂದಿರಾದ ಮಿತಿಲೇಶ್ ಮತ್ತು ಅಖಿಲೇಶ್ ಕೂಡಾ ಈ ಘಟನೆಯಲ್ಲಿ ಗಾಯೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಭಾನುವಾರ ವರನ ಮಾವರಾಮ ಪ್ರತಾಪ್ ಅವರು ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇ ಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿ ಅಂಕಿತ್ ಮಿತ್ತಲ್ ಹೇಳಿದ್ದಾರೆ.

ಗುಂಡು ತಾಗಿ ಗಾಯಗೊಂಡಿರುವ ಮಹಿಳೆ ಕಾನ್ಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT