ನವದೆಹಲಿ: ಭಾರತದಲ್ಲಿ ಹೊಸ ಮತದಾರರ ಸಂಖ್ಯೆ ಅತಿ ಶೀಘ್ರದಲ್ಲಿ 100 ಕೋಟಿಗೆ ತಲುಪಲಿದೆ ಎಂದು ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.

ದೆಹಲಿ ವಿಧಾನಸಭಾ ಚುನಾವಣೆ ಘೋಷಣೆಗೆ ಸಂಬಂಧಿಸಿದಂತೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

‘ಮತದಾರರ ಪಟ್ಟಿ ಸೋಮವಾರ ಬಿಡುಗಡೆಯಾಗಿದೆ. ಸದ್ಯ ಮತದಾರರ ಸಂಖ್ಯೆ 99 ಕೋಟಿ ದಾಟಿದೆ. ಇದು ಅತಿ ಶೀಘ್ರದಲ್ಲಿ ಶತಕೋಟಿ ದಾಟಲಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
.Delhi Assembly Election | ಫೆ. 5ರಂದು ಮತದಾನ; ಫೆ. 8ಕ್ಕೆ ಮತ ಎಣಿಕೆ: CEC.Delhi Polls | ಪ್ರಿಯಾಂಕಾ ಗಾಂಧಿ ಕೆನ್ನೆಯಂಥ ರಸ್ತೆ ನಿರ್ಮಿಸುವೆ: BJP ಅಭ್ಯರ್ಥಿ.
‘ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾನಕ್ಕೆ ಏಳು ದಿನಗಳು ಇರುವಾಗ ಕ್ಷೇತ್ರಗಳಿಗೆ ಮತಯಂತ್ರಗಳು ತಲುಪಲಿವೆ. ಈ ಮಾಹಿತಿಯನ್ನು ಪ್ರತಿಯೊಂದು ಪಕ್ಷಗಳ ಏಜೆಂಟರಿಗೆ ಮಾಹಿತಿ ನೀಡಲಾಗುವುದು. ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ 42 ಬಾರಿ ಹೇಳಿದೆ. ಹೀಗಾಗಿ ಮತಯಂತ್ರಗಳನ್ನು ತಿರುಚಿರುವ ಆರೋಪ ಆಧಾರ ರಹಿತ’ ಎಂದರು.

‘ಮತದಾನದ ಪ್ರಮಾಣ ಸಂಜೆ 5ರ ನಂತರ ಹೆಚ್ಚಾಗುತ್ತಿದೆ. ಹೀಗಾಗಿ ಮತದಾನದ ಪ್ರಮಾಣ ತಿದ್ದಲು ಸಾಧ್ಯವಿಲ್ಲ. ಈ ಎಲ್ಲಾ ಮಾಹಿತಿಗಳು ಚುನಾವಣಾ ಆಯೋಗದ ಅಂತರ್ಜಾಲ ಪುಟದಲ್ಲಿ ಲಭ್ಯ. ಮಾಹಿತಿ ಬಹಿರಂಗ ನಮ್ಮ ಮುಖ್ಯ ಆಧಾರ’ ಎಂದು ತಿಳಿಸಿದ್ದಾರೆ.
.Delhi Elections: ಸಿಎಂ ಅತಿಶಿ ವಿರುದ್ಧ ಕಾಂಗ್ರೆಸ್ನ ಅಲ್ಕಾ ಲಾಂಬಾ ಕಣಕ್ಕೆ .Delhi Elections 2025 | 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಎನ್ಸಿಪಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.