ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರದಲ್ಲಿ ಪಾಶ್ಚಿಮಾತ್ಯ ದೇಶಗಳನ್ನು ನಕಾರಾತ್ಮಕವಾಗಿ ನೋಡಬಾರದು: ಜೈಶಂಕರ್‌

Published 18 ಸೆಪ್ಟೆಂಬರ್ 2023, 6:06 IST
Last Updated 18 ಸೆಪ್ಟೆಂಬರ್ 2023, 6:06 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ವಾಣಿಜ್ಯ ಮತ್ತು ವ್ಯಾಪಾರ ವಿಷಯದಲ್ಲಿ ಪಾಶ್ಚಿಮಾತ್ಯ ದೇಶಗಳು ಕೆಟ್ಟವು ಎಂಬ ದೃಷ್ಟಿಕೋನವಿದೆ. ಇದು ಬದಲಾಗಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ. 

ಪಾಶ್ಚಿಮಾತ್ಯ ದೇಶಗಳಿಂದ ಏಷ್ಯಾ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ದೊಡ್ಡ ಪ್ರಮಾಣದಲ್ಲಿ ಸರಕುಗಳು ಬರುತ್ತಿಲ್ಲ. ಆದ್ದರಿಂದ ಈ ಭಾಗದ ದೇಶಗಳನ್ನು ನಕಾರಾತ್ಮಕವಾಗಿ ನೋಡುವ ಧೋರಣೆ ಬದಲಾಗುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ಮಲಯಾಳಂನ ಏಷ್ಯಾನೆಟ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

ಪಾಶ್ಚಿಮಾತ್ಯ ದೇಶಗಳ ಪರವಾಗಿ ನಾನು ಮಾತನಾಡುತ್ತಿಲ್ಲ ಎಂದ ಅವರು,  ಜಾಗತೀಕರಣದಿಂದ ರಿಯಾಯಿತಿ, ಸಬ್ಸಿಡಿಗಳಿಂದಾಗಿ ಉತ್ಪಾದನೆಯು ಒಂದೇ ಕಡೆ ಕೇಂದ್ರಿತವಾಗಿದೆ. ಇದರಿಂದ ಹಲವು ದೇಶಗಳ ಆರ್ಥಿಕತೆಗೆ ತೊಂದರೆಯಾಗುತ್ತಿದೆ ಎಂದರು.

ಪಶ್ಚಿಮದವರು ಕೆಟ್ಟವರು, ಅಭಿವೃದ್ಧಿಶೀಲ ದೇಶಗಳು ಒಳ್ಳೆಯವು ಎಂಬ ಪರಿಕಲ್ಪನೆಯನ್ನು ಕಳಚುವ ಅವಶ್ಯಕತೆ ಇದೆ ಎಂಬುದು ನನ್ನ ಭಾವನೆ ಎಂದು ಜೈಶಂಕರ್ ಹೇಳಿದ್ದಾರೆ.

ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಗೈರಾಗಿರುವುದಕ್ಕೆ ಕಾರಣವೇನಿರಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತದ ಮಾರುಕಟ್ಟೆಗೆ ಬಹಳ ಅಗ್ಗದ ಸರಕುಗಳು ಬಂದು ಬೀಳುತ್ತಿರುವುದು ಕೆಲ ದೇಶಗಳಿಗೆ ಕಿರಿಕಿರಿಯಾಗುತ್ತಿದೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT