ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ (ಎಲ್ಲರೊಂದಿಗೆ ಎಲ್ಲರ ಏಳಿಗೆ) ತತ್ವದ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷವು, ಮತ ಗಳಿಕೆಗಾಗಿ ಓಲೈಕೆ ರಾಜಕಾರಣದಲ್ಲಿ ತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ರಾಷ್ಟ್ರಪತಿ ದ್ರೌಪತಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಇಂದು (ಗುರುವಾರ) ರಾಜ್ಯಸಭೆಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಪಕ್ಷ ಆದ್ಯತೆ ನೀಡುವುದು ಕುಟುಂಬಕ್ಕೆ. ಆ ಪಕ್ಷದ ರಾಜಕೀಯವೂ ಅದರ ಸುತ್ತಲೇ ನಡೆಯುತ್ತಿದೆ. ಆದರೆ, 'ದೇಶ ಮೊದಲು ಎನ್ನುವುದು ಬಿಜೆಪಿಯ ಪ್ರಾಶಸ್ತ್ಯ' ಎಂದು ಪ್ರತಿಪಾದಿಸಿದ್ದಾರೆ.

'ಐದು – ಆರು ದಶಕಗಳಲ್ಲಿ ಜನರಿಗೆ ಪರ್ಯಾಯ ಮಾದರಿಯೇ ಇರಲಿಲ್ಲ. ಬಹಳ ದೀರ್ಘ ಸಮಯದ ನಂತರ, 2014ರ ಬಳಿಕ ಓಲೈಕೆಯ ಆಧಾರದ್ದಲ್ಲದ, ಎಲ್ಲರಿಗೂ ಸಮಾಧಾನಕರವಾದ ಹೊಸ ಮಾದರಿಗೆ ದೇಶ ಸಾಕ್ಷಿಯಾಗಿದೆ ಎಂಬುದಾಗಿ ಬಹಳ ಹೆಮ್ಮೆಯಿಂದ ಹೇಳುತ್ತೇನೆ' ಎಂದಿದ್ದಾರೆ.

'ಈ ಹಿಂದಿನ ಮಾದರಿಯು, ಅದರಲ್ಲೂ ಕಾಂಗ್ರೆಸ್ ಆಡಳಿತದಲ್ಲಿ ಎಲ್ಲೆಡೆ ಓಲೈಕೆಯ ವಾತಾವರಣವಿತ್ತು. ಅದು ಆ ಪಕ್ಷದ ರಾಜಕೀಯವನ್ನು ಕಠಿಣವಾಗಿಸಿತ್ತು. ಅದರಿಂದಾಗಿ, ಸಣ್ಣ ಗುಂಪಿನ ಜನರಿಗೆ ಏನನ್ನಾದರೂ ನೀಡುವ ಸಲುವಾಗಿ ಉಳಿದವರಿಗೆ ವಂಚಿಸಲಾಗುತ್ತಿತ್ತು. ಚುನಾವಣೆ ಸಂದರ್ಭಗಳಲ್ಲಿ, ಸುಳ್ಳು ಭರವಸೆಗಳನ್ನು ನೀಡಲಾಗುತ್ತಿತ್ತು. ತನ್ನ ರಾಜಕೀಯವನ್ನು ಮೂರ್ಖರಿಂದಲೇ ನಡೆಸುತ್ತಿತ್ತು' ಎಂದು ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ಅವರು, ತಮ್ಮ ಸರ್ಕಾರವು ಸಂಪನ್ಮೂಲಗಳ ಸದ್ಬಳಕೆಯತ್ತ ಗಮನ ಹರಿಸಿದೆ ಎಂದು ಹೇಳಿಕೊಂಡಿದ್ದಾರೆ.

'ಆಡಳಿತದಲ್ಲಿ ನಾವು ಪರಿಪೂರ್ಣತೆಯನ್ನು ಅಳವಡಿಸಿಕೊಂಡಿದ್ದೇವೆ. ಯಾವುದೇ ಯೋಜನೆಯಿಂದ ಯಾರೊಬ್ಬರೂ ಹೊರಗುಳಿಯದಂತೆ ನೋಡಿಕೊಳ್ಳಲು ಶೇ 100 ರಷ್ಟು ಕಾರ್ಯಗತಗೊಳಿಸುತ್ತಿದ್ದೇವೆ. ಕಳೆದ ಒಂದು ದಶಕದಲ್ಲಿ ಎಲ್ಲ ಹಂತಗಳಲ್ಲಿಯೂ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಿದ್ದೇವೆ. ಅದರ ಪರಿಣಾಮವನ್ನು ಕಾಣಬಹುದಾಗಿದೆ' ಎಂದಿದ್ದಾರೆ.
.ಏಕರೂಪ ನಾಗರೀಕ ಸಂಹಿತೆ ರಾಜಕೀಯ ಅಸ್ತ್ರವಾಗಬಾರದು: ಕಾಂಗ್ರೆಸ್.2009ರಿಂದ 15 ಸಾವಿರ ಭಾರತೀಯರು ಅಮೆರಿಕದಿಂದ ಗಡೀಪಾರಾಗಿದ್ದಾರೆ: MEA ಜೈಶಂಕರ್.
ಜಾತಿವಾದವನ್ನು ಎಲ್ಲೆಡೆ ಹರಡುವ ಪ್ರಯತ್ನ ನಡೆಯುತ್ತಿದೆ ಎಂದೂ ಮೋದಿ ಅಸಮಾಧಾನ ಹೊರಹಾಕಿದ್ದಾರೆ.

'ಎಲ್ಲೆಡೆ ಜಾತಿಯ ವಿಷ ಬಿತ್ತುವ ಪ್ರಯತ್ನಗಳು ನಡೆಯುತ್ತಿವೆ. ಇತರ ಹಿಂದುಳಿದ ವರ್ಗಗಳಿಗೆ ಸೇರಿದ (ಒಬಿಸಿ) ಸಂಸದರು ಉಭಯ ಸದನಗಳಲ್ಲಿ ಒಬಿಸಿ ಆಯೋಗಕ್ಕಾಗಿ ಕಳೆದ ಮೂರು ದಶಕಗಳಿಂದ ಬೇಡಿಕೆ ಇಟ್ಟಿದ್ದರು. ಬಹುಶಃ, ರಾಜಕೀಯ ಮಾಡಲು ತೊಡಕಾಗುತ್ತದೆ ಎಂಬ ಕಾರಣಕ್ಕೆ ಅದನ್ನು ತಿರಸ್ಕರಿಸಲಾಗಿತ್ತು. ಆದರೆ, ನಾವೀಗ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿದ್ದೇವೆ' ಎಂದು ಮೋದಿ ಹೇಳಿದ್ದಾರೆ.

'ಮೀಸಲಾತಿ ಕೂಗು ಎದ್ದಾಗಲೆಲ್ಲ, ದೇಶದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸುವ ಪ್ರಯತ್ನಗಳು ನಡೆದಿವೆ' ಎನ್ನುವ ಮೂಲಕ ವಿರೋಧ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಇದೇ ಮೊದಲ ಬಾರಿಗೆ ನಾವೊಂದು ಮಾದರಿ ನೀಡಿದ್ದೇವೆ. ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶೇ 10 ರಷ್ಟು ಮೀಸಲಾತಿ ನೀಡಿದ್ದೇವೆ. ಎಸ್ಸಿ, ಎಸ್ಟಿ ಹಾಗೂ ಒಬಿಸಿ ಸಮುದಾಯಗಳು ಇದನ್ನು ಸ್ವಾಗತಿಸಿವೆ. ಇದರಿಂದ ಯಾರಿಗೂ ತೊಂದರೆಯಾಗಿಲ್ಲ' ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.