ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾದೇಶದಲ್ಲಿ ಆಗಿದ್ದು ನಮ್ಮಲ್ಲೂ ಆಗಬಹುದು: ಸಲ್ಮಾನ್ ಖುರ್ಷಿದ್‌

Published 7 ಆಗಸ್ಟ್ 2024, 2:32 IST
Last Updated 7 ಆಗಸ್ಟ್ 2024, 2:32 IST
ಅಕ್ಷರ ಗಾತ್ರ

ನವದೆಹಲಿ: ಬಾಂಗ್ಲಾದೇಶದಲ್ಲಿ ಆಗುತ್ತಿರುವುದು ನಮ್ಮ ದೇಶದಲ್ಲೂ ಆಗಬಹದು. ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎಂಬಂತೆ ಕಾಣುತ್ತದೆ ಎಂದು ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ಶಿಕ್ಷಣ ತಜ್ಞ ಮುಜಿಬುರ್‌ ರೆಹಮಾನ್ ಅವರ ‘ಶಿಖ್ವಾ––ಎ–ಹಿಂದ್‌: ದಿ ಪೊಲಿಟಿಕಲ್ ಫ್ಯೂಚರ್‌ ಅಫ್ ಇಂಡಿಯನ್ ಮುಸ್ಲಿಮ್ಸ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮೇಲ್ನೋಟಕ್ಕೆ ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿದೆ ಎಂದು ಕಾಣಿಸಬಹುದು. ಇಲ್ಲಿ ಎಲ್ಲವೂ ಸರಿ ಇದೆ ಎಂದು ತೋರಬಹುದು. ನಾವು ಗೆಲುವನ್ನು ಸಂಭ್ರಮಿಸಬಹುದು. 2024ರ ಗೆಲುವು ಅತ್ಯಲ್ಪ ಎಂದು ನಂಬುವವರಿದ್ದಾರೆ. ಇನ್ನೂ ಹೆಚ್ಚಿನದು ಆಗಬೇಕಿದೆ. ಆದರೆ ವಾಸ್ತವ ಬೇರೆಯದೇ ಇದೆ. ಬಾಂಗ್ಲಾದೇಶದಲ್ಲಿ ಸಂಭವಿಸಿದ್ದು, ನಮ್ಮ ದೇಶದಲ್ಲಿಯೂ ನಡೆಯಬಹುದು’ ಎಂದು ಅವರು ಹೇಳಿದ್ದಾರೆ.

‘ಶಹೀನ್‌ಭಾಗ್ ಚಳುವಳಿ ವಿಫಲವಾಯಿತು ಎಂದು ನಾನು ಹೇಳಿದರೆ ನೀವು ನಂಬುವಿರೇ? ಶಹೀನ್‌ಭಾಗ್‌ ಹೋರಾಟ ಯಶ ಕಂಡಿದೆ ಎಂದು ಹಲವರು ನಂಬಿದ್ದಾರೆ. ಆದರೆ ಶಹೀನ್‌ಭಾಗ್‌ ಚಳವಳಿಯಲ್ಲಿ ಇದ್ದವರಿಗೆ ಏನಾಗುತ್ತಿದೆ ಎನ್ನುವುದು ನನಗೆ ತಿಳಿದಿದೆ. ಅವರಲ್ಲಿ ಎಷ್ಟು ಜನ ಈಗಲೂ ಜೈಲಿನಲ್ಲಿದ್ದಾರೆ? ಆ ಪೈಕಿ ಎಷ್ಟು ಜನರಿಗೆ ಜಾಮೀನು ಸಿಗುತ್ತಿಲ್ಲ? ಅವರಲ್ಲಿ ಎಷ್ಟು ಮಂದಿಯನ್ನು ದೇಶದ ಶತ್ರುಗಳಾಗಿ ಬಿಂಬಿಸಿಲ್ಲ?’ ಎಂದು ಖುರ್ಷಿದ್ ಪ್ರಶ್ನಿಸಿದ್ದಾರೆ.

ಶಹೀನ್‌ಭಾಗ್‌ನಂತಹ ಚಳುವಳಿ ಮತ್ತೆ ನಡೆಯಬಹುದೇ ಎಂದು ನನ್ನನ್ನು ಕೇಳಿದರೆ, ಅದು ಸಾಧ್ಯವಿಲ್ಲ ಎಂದು ನಾನು ಹೇಳುತ್ತೇನೆ. ಏಕೆಂದರೆ ಅವರು ತುಂಬಾ ತೊಂದರೆಗೊಳಗಾಗಿದ್ದಾರೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT