ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೊಡ್ಡ ಬೆಕ್ಕು’ ಜಾತಿಯ ಪ್ರಾಣಿಗಳ ರಕ್ಷಣೆಗೆ ವಿಶ್ವ ಮೈತ್ರಿ ಘೋಷಿಸಿದ ಮೋದಿ

Last Updated 9 ಏಪ್ರಿಲ್ 2023, 10:23 IST
ಅಕ್ಷರ ಗಾತ್ರ

ಮೈಸೂರು: ಭಾರತದಲ್ಲಿ ಹುಲಿ ಯೋಜನೆಗೆ 50 ವರ್ಷ ಪೂರ್ಣಗೊಂಡಿರುವುದರ ಸ್ಮರಣಾರ್ಥವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ‘ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಮೈತ್ರಿ (International Big Cat Alliance) – ಐಬಿಸಿಎ’ಯನ್ನು ಘೋಷಿಸಿದ್ದಾರೆ.

ಭಾನುವಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಮೋದಿ ಅವರು ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ನಂತರ ತೆರೆದ ಜೀಪ್‌ನಲ್ಲಿ (ಬೊಲೆರೊ ಕ್ಯಾಂಪರ್) ಸಫಾರಿಗೆ ತೆರಳಿದ ಅವರು ಎರಡು ಗಂಟೆಗಳ‌ ಕಾಲ ಬಂಡೀಪುರ ಅರಣ್ಯದಲ್ಲಿ ಸಂಚರಿಸಿ, ಪ್ರಕೃತಿ ಸೌಂದರ್ಯ ಸವಿದರು. ನಂತರ ಇತ್ತೀಚಿನ ಹುಲಿ ಗಣತಿ ವರದಿ ಬಿಡುಗಡೆ ಮಾಡಿದ ಅವರು, ಐಬಿಸಿಎ ಘೋಷಣೆ ಮಾಡಿದರು.

ವಿಶ್ವದ ಏಳು ‘ದೊಡ್ಡ ಬೆಕ್ಕು’ ಜಾತಿಯ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ, ಜಾಗ್ವಾರ್ ಮತ್ತು ಚಿರತೆಗಳ ಸಂರಕ್ಷಣೆ ಮಾಡುವುದರತ್ತ ಐಬಿಸಿಎ ಗಮನ ಹರಿಸಲಿದೆ ಎಂದು ಅವರು ಹೇಳಿದರು. ಈ ಜಾತಿಯ ವನ್ಯಜೀವಿಗಳಿಗೆ ಆಶ್ರಯ ನೀಡಿರುವ 97 ದೇಶಗಳು ಈ ಮೈತ್ರಿಗೆ ಸೇರಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT