ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುರೋಪಿಯನ್‌ ಎಸ್ಸೇ’ ಪ್ರಶಸ್ತಿಗೆ ಅರುಂಧತಿ ರಾಯ್‌ ಆಯ್ಕೆ

Published 16 ಜೂನ್ 2023, 14:45 IST
Last Updated 16 ಜೂನ್ 2023, 14:45 IST
ಅಕ್ಷರ ಗಾತ್ರ

ನವದೆಹಲಿ: ಬೂಕರ್ ಪ್ರಶಸ್ತಿ ವಿಜೇತರಾದ ಲೇಖಕಿ ಅರುಂಧತಿ ರಾಯ್‌ ಅವರಿಗೆ ಜೀವಮಾನ ಶ್ರೇಷ್ಠ ಸಾಧನೆಗಾಗಿ 45ನೇ ‘ಯುರೋಪಿಯನ್‌ ಎಸ್ಸೇ ಪ್ರೈಜ್‌’ ನೀಡಲಾಗುತ್ತದೆ ಎಂದು ಚಾಲ್ಸ್‌ ವೈಲನ್‌ ಫೌಂಡೇಷನ್‌ ಪ್ರಕಟಿಸಿದೆ.

‘ಆಜಾದಿ’ (2021) ಎಂಬ ಶೀರ್ಷಿಕೆಯ ಪ್ರಬಂಧಗಳ ಸಂಕಲನದ ಫ್ರೆಂಚ್‌ ಅನುವಾದಕ್ಕಾಗಿ ರಾಯ್‌ ಅವರಿಗೆ ಈ ಪ್ರಶಸ್ತಿ ನೀಡಲಾಗುವುದು ಎಂದು ಫೌಂಡೇಷನ್‌ ತಿಳಿಸಿದೆ. ಈ ಸಂಕಲನದಲ್ಲಿ ರಾಯ್‌ ಅವರು, ‘ಬೆಳೆಯುತ್ತಿರುವ ನಿರಂಕುಶವಾದ’ದ ಜಗತ್ತಿನಲ್ಲಿ ಸ್ವಾತಂತ್ರ್ಯದ ಅರ್ಥವನ್ನು ಪ್ರತಿಬಿಂಬಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.

ಸ್ವಿಟ್ಜರ್‌ಲೆಂಡ್‌ನ ಲುಸಾನ್‌ ನಗರದಲ್ಲಿ ಸೆಪ್ಟೆಂಬರ್‌ 12ರಂದು ನಡೆಯುವ ಸಮಾರಂಭದಲ್ಲಿ ಅಂದಾಜು ₹ 18 ಲಕ್ಷ ಮೊತ್ತದೊಂದಿಗೆ ಪ್ರಶಸ್ತಿಯನ್ನು ರಾಯ್‌ ಅವರು ಸ್ವೀಕರಿಸಲಿದ್ದಾರೆ.

ದೆಹಲಿ ಮೂಲದ ಲೇಖಕಿಯಾದ ಅರುಂಧತಿ ರಾಯ್‌ ಅವರು, ‘ದಿ ಗಾಡ್‌ ಆಫ್‌ ಸ್ಮಾಲ್ ಥಿಂಗ್ಸ್‌’, ‘ದಿ ಮಿನಿಸ್ಟ್ರಿ ಆಫ್‌ ಅಟ್ಮೋಸ್ಟ್‌ ಹ್ಯಾಪಿನೆಸ್‌’ ಸೇರಿದಂತೆ ಹಲವು ಕೃತಿಗಳನ್ನು ಬರೆದಿದ್ದು, ಅವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT