ಪಿತ್ರೊಡಾ ಹೇಳಿಕೆ

‘ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ, ಮನೆಯಲ್ಲಿರುವಂತಹ ಭಾವನೆ ಉಂಟಾಯಿತು’ ಎಂದು ಕಾಂಗ್ರೆಸ್ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೊಡಾ ಅವರು ಸೆಪ್ಟೆಂಬರ್ 19ರಂದು ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ಹಾಗೂ ಜನರಿಂದ ಆಕ್ರೋಶ ವ್ಯಕ್ತವಾಯಿತು. ‘ಪಿತ್ರೊಡಾ ಹೇಳಿಕೆ ದೇಶದ ಸೈನಿಕರು ಹಾಗೂ ಜನರಿಗೆ ಅವಮಾನ ಮಾಡಿದೆ’ ಎಂಬ ಟೀಕೆ ಕೇಳಿಬಂತು

ರಣವೀರ್ ಸಿಂಗ್ ಅಲಹಾಬಾದಿಯಾ ಅಶ್ಲೀಲ ಹೇಳಿಕೆ

‘ಇಂಡಿಯಾಸ್ ಗಾಟ್ ಟ್ಯಾಲೆಂಟ್’ ಕಾರ್ಯಕ್ರಮದಲ್ಲಿ ಪಾಡ್ಕಾಸ್ಟರ್ ರಣವೀರ್ ಸಿಂಗ್ ಅಲಹಾಬಾದಿಯಾ ಅವರು ಅಶ್ಲೀಲ ಮಾತುಗಳನ್ನಾಡುವ ಮೂಲಕ ದೇಶದಾದ್ಯಂತ ಭಾರಿ ಟೀಕೆಗೆ ಗುರಿಯಾದರು. ಇವರ ವಿರುದ್ಧ ಹಲವೆಡೆ ಎಫ್ಐಆರ್ಗಳು ದಾಖಲಾದವು. ಸುಪ್ರೀಂ ಕೋರ್ಟ್ ಕೂಡ ರಣವೀರ್ ಅವರ ಹೇಳಿಕೆ ಬಗ್ಗೆ ಛೀಮಾರಿ ಹಾಕಿತ್ತು. ಪ್ರಕರಣದ ವಿಚಾರಣೆ ಹಂತದಲ್ಲಿದೆ

ವಂದೇ ಮಾತರಂ ವಿವಾದ

150 ವರ್ಷಗಳು ತುಂಬಿರುವ ‘ವಂದೇ ಮಾತರಂ’ ಹಾಡಿಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ನಡೆದ ಚರ್ಚೆ, ಸದನದ ಹೊರಗಡೆಯೂ ಬಿರುಸಿನ ವಾದ ಪ್ರತಿವಾದಕ್ಕೆ ಕಾರಣವಾಯಿತು. ಗೀತೆಯ ಇತಿಹಾಸ ಮತ್ತು ಪೂರ್ಣ ಹಾಡಿನ ಹಲವು ಸಾಲುಗಳನ್ನು ಕಡಿತಗೊಳಿಸಿರುವ ಬಗ್ಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ವಾಗ್ವಾದ ನಡೆಯಿತು. ‘ಮುಸ್ಲಿಮರ ಓಲೈಕೆಗಾಗಿ ಜವಾಹರಲಾಲ್ ನೆಹರೂ ಅವರು ಹಾಡಿನ ಪರಿಷ್ಕರಣೆಗೆ ಕಾರಣರಾದು ಎಂದು ಬಿಜೆಪಿ ಆರೋಪಿಸಿದ್ದರೆ, ಟ್ಯಾಗೋರ್ ಅವರ ಸಲಹೆಯ ಮೇರೆಗೆ ಒಗ್ಗಟ್ಟು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿತ್ತು’ ಎಂದು ಕಾಂಗ್ರೆಸ್ ಹೇಳಿತು. ಸದನದ ಹೊರಗಡೆ ಎರಡೂ ಪಕ್ಷಗಳ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಯಲ್ಲಿ ತೊಡಗಿದರು

ಗೋಡ್ಸೆ ಹೊಗಳಿದ ಪ್ರಾಧ್ಯಾಪಕಿಗೆ ಡೀನ್ ಹುದ್ದೆ

‘ಮಹಾತ್ಮ ಗಾಂಧಿಯನ್ನು ಹತ್ಯೆಗೈದು ಗೋಡ್ಸೆಯವರು ದೇಶವನ್ನು ರಕ್ಷಿಸಿದರು. ಇದು ಹೆಮ್ಮೆ ವಿಚಾರ’ ಎಂಬರ್ಥದ ಪ್ರತಿಕ್ರಿಯೆ ನೀಡಿದ್ದ ಕೇರಳದ ಪ್ರೊಫೆಸರ್ ಶೈಜಾ ಎ. ಅವರನ್ನು ಕೇರಳದ ಕೋಯಿಕ್ಕೋಡ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡೀನ್ ಹುದ್ದೆಗೆ ನೇಮಕ ಮಾಡಲಾಯಿತು. ಕೇಂದ್ರ ಸರ್ಕಾರದ ಈ ಕ್ರಮವನ್ನು ಕಾಂಗ್ರೆಸ್, ಎಡಪಕ್ಷಗಳು ವಿರೋಧಿಸಿದವು

ವಾರಕ್ಕೆ 90 ಗಂಟೆ ಕೆಲಸ ಮಾಡಬೇಕಾ?

ಜನವರಿಯಲ್ಲಿ ಇನ್ಫೊಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು, ಯುವಕರು ದೇಶದ ಅಭಿವೃದ್ಧಿಗಾಗಿ ವಾರಕ್ಕೆ 70ರಿಂದ 72 ಗಂಟೆ ಕೆಲಸ ಮಾಡಬೇಕು ಎಂಬ ತಮ್ಮ ಹಳೆಯ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಇದರ ಬೆನ್ನಲ್ಲೇ, ಎಲ್ ಆ್ಯಂಡ್ ಟಿ ಕಂಪನಿ ಮುಖ್ಯಸ್ಥ ಎಸ್.ಎನ್. ಸುಬ್ರಹ್ಮಣ್ಯನ್ ಅವರು ‘ಯುವಕರು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಮತ್ತು ಭಾನುವಾರವೂ ಕಚೇರಿಗೆ ಬರಬೇಕು, ಮನೆಯಲ್ಲಿ ಸುಮ್ಮನೆ ಕುಳಿತು ಹೆಂಡತಿಯ ಮುಖ ನೋಡುತ್ತಾ ಏನು ಮಾಡುತ್ತೀರಿ?’ ಎಂದು ನೀಡಿದ್ದ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಯಿತು

ರಾಜ್ಯಪಾಲ– ಡಿಎಂಕೆ ಜಟಾಪಟಿ

ರಾಜ್ಯಪಾಲ ಎನ್.ಆರ್. ರವಿ ಮತ್ತು ತಮಿಳುನಾಡಿನ ಡಿಎಂಕೆ ಸರ್ಕಾರ ನಡುವೆ ಸಂಘರ್ಷ ರಾಷ್ಟ್ರದ ಗಮನ ಸೆಳೆಯಿತು. ಏಪ್ರಿಲ್ 8ರಂದು ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಲ್ಲಿ, ರಾಜ್ಯಪಾಲ ಆರ್.ಎನ್. ರವಿ ಅವರು 10 ಮಸೂದೆಗಳನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಾಯ್ದಿರಿಸಿದ ಕ್ರಮವು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಘೋಷಿಸಿತು. ಜನವರಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ತಾವು ಭಾಷಣ ಓದುವ ಮೊದಲು ರಾಷ್ಟ್ರಗೀತೆಯನ್ನು ನುಡಿಸಲಿಲ್ಲ ಎಂಬ ಕಾರಣಕ್ಕೆ ರವಿ ಅವರು ಸದನದಿಂದ ಹೊರನಡೆದರು. ಏಪ್ರಿಲ್ನಲ್ಲಿ ಚೆನ್ನೈನ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳಿಗೆ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುವಂತೆ ಹೇಳಿದ್ದು ಮತ್ತೊಂದು ವಿವಾದಕ್ಕೆ ಕಾರಣವಾಯಿತು

ವಿಜಯ್ ಶಾ ಮಾತು

‘ಪಾಕಿಸ್ತಾನದಲ್ಲಿನ ಭಯೋತ್ಪಾದಕರಿಗೆ ಅವರ ಸಹೋದರಿಯಿಂದಲೇ ಪಾಠ ಕಲಿಸಲಾಗಿದೆ’ ಎಂದು ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಉಲ್ಲೇಖಿಸಿ ಹೇಳಿಕೆ ನೀಡುವ ಮೂಲಕ ಮಧ್ಯಪ್ರದೇಶದ ಬುಡಕಟ್ಟು ವ್ಯವಹಾರಗಳ ಸಚಿವ ವಿಜಯ್ ಶಾ ವಿವಾದವನ್ನು ಮೈಮೇಲೆ ಎಳೆದುಕೊಂಡರು. ಸೋಫಿಯಾ ಅವರು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಅಧಿಕೃತವಾದ ಮಾಹಿತಿ ಒದಗಿಸುತ್ತಿದ್ದ ತಂಡದ ಭಾಗವಾಗಿದ್ದರು. ವಿಜಯ್ ಅವರು ಈ ಹೇಳಿಕೆಗೆ ಆಕ್ರೋಶ ವ್ಯಕ್ತವಾಯಿತು. ಅವರ ವಿರುದ್ಧ ಎಫ್ಐಆರ್ ದಾಖಲಾಯಿತು. ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಯಿತು

ಇತರ ವಿವಾದಗಳು

* ಮಾರ್ಚ್ನಲ್ಲಿ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಸಂಭವಿಸಿದ ಅಗ್ನಿ ಅವಘಡದ ಸಮಯದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದ್ದು ನ್ಯಾಯಾಂಗದ ಇತಿಹಾಸದಲ್ಲೇ ದೊಡ್ಡ ವಿವಾದ ಸೃಷ್ಟಿಸಿತು

* ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ವಿಡಿಯೊವೊಂದರಲ್ಲಿ ‘ವಂಚಕ’ ಎಂದು ಕರೆದಿದ್ದಾರೆ ಎಂದು ಆರೋಪಿಸಿ ಸ್ಟ್ಯಾಂಡ್ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ವಿರುದ್ಧ ಆಕ್ರೋಶ ವ್ಯಕ್ತವಾಯಿತು

* ‘ಮೊಘಲ್ ದೊರೆ ಔರಂಗಜೇಬ್ ಕ್ರೂರ ಮತ್ತು ಹಿಂದೂ ವಿರೋಧಿಯಾಗಿರಲಿಲ್ಲ. ಆತನ ಆಳ್ವಿಕೆ ಅವಧಿಯಲ್ಲಿ ಭಾರತ ಸಮೃದ್ಧವಾಗಿತ್ತು. ಇತಿಹಾಸವನ್ನು ತಿರುಚಲಾಗಿದೆ’ ಇದು ಸಮಾಜವಾದಿ ಪಕ್ಷದ ಶಾಸಕ ಅಬೂ ಆಸಿಂ ಆಜ್ಮಿ ಅವರು ನೀಡಿದ್ದ ಹೇಳಿಕೆ. ಇದನ್ನು ವಿರೋಧಿಸಿ ಹಲವೆಡೆ ಅಜ್ಮಿ ವಿರುದ್ಧ ಎಫ್ಐಆರ್ಗಳನ್ನು ದಾಖಲಿಸಲಾಗಿತ್ತು. ಬಜೆಟ್ ಅಧಿವೇಶದ ಅಂತ್ಯದವರೆಗೆ ಮಹಾರಾಷ್ಟ್ರ ವಿಧಾನಸಭೆಯಿಂದ ಆಜ್ಮಿ ಅವರನ್ನು ಅಮಾನತು ಮಾಡಲಾಯಿತು. ಬಳಿಕ ಅವರು ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆಯಾಚಿಸಿದರು

* ‘ರಾಹುಲ್ ಗಾಂಧಿ ಅವರ ನಾಲಿಗೆ ಕತ್ತರಿಸಿದವರಿಗೆ ₹11 ಲಕ್ಷ ಇನಾಮು ನೀಡಲಾಗುವುದು’ ಹೀಗೆ ಘೋಷಣೆ ಮಾಡಿ ವಿವಾದವನ್ನು ಶಿವಸೇನಾ (ಶಿಂದೆ ಬಣ) ಶಾಸಕ ಸಂಜಯ್ ಗಾಯಕ್ವಾಡ್ ಮೈಮೇಲೆಳೆದುಕೊಂಡರು

* ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯಡಿ ಜಾರಿಗೊಳಿಸಲು ಉದ್ದೇಶಿಸಿರುವ ತ್ರಿಭಾಷಾ ಸೂತ್ರವನ್ನು ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ದಕ್ಷಿಣ ರಾಜ್ಯಗಳು ವಿರೋಧಿಸಿದವು

* ಡಿಸೆಂಬರ್ 15ರಂದು ಬಿಹಾರದ ಪಾಟ್ನಾದಲ್ಲಿ ನಡೆದ ಸರ್ಕಾರಿ ನೇಮಕಾತಿ ಪತ್ರ ವಿತರಣಾ ಸಮಾರಂಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ವೇದಿಕೆಯ ಮೇಲೆ ಮುಸ್ಲಿಂ ವೈದ್ಯೆಯೊಬ್ಬರ ನಖಾಬ್ (ಮುಖಗವಸು) ಎಳೆದು ಭಾರಿ ವಿವಾದ ಸೃಷ್ಟಿಸಿದರು

* ಮಾರ್ಚ್ನಲ್ಲಿ ನಡೆದ ನೀಟ್-ಯುಜಿ ಪರೀಕ್ಷಾ ಸುಧಾರಣೆಗಳ ಕುರಿತಾದ ವಿವಾದವು ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿತು. ಪರೀಕ್ಷಾ ಪದ್ಧತಿಯಲ್ಲಿನ ಪಾರದರ್ಶಕತೆ ಮತ್ತು ಹೊಸದಾಗಿ ಜಾರಿಗೆ ತಂದ ‘ಡಿಜಿಟಲ್ ಕಣ್ಗಾವಲು’ ನಿಯಮಗಳಲ್ಲಿನ ತಾಂತ್ರಿಕ ಲೋಪಗಳ ಬಗ್ಗೆ ವಿದ್ಯಾರ್ಥಿ ಸಮೂಹ ಆಕ್ಷೇಪ ವ್ಯಕ್ತಪಡಿಸಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿತು

* ಮಾಜಿ ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರು ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿ ವಂಚನೆ ಎಸಗಿದ ಪ್ರಕರಣದಲ್ಲಿ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಬಂಧನದಿಂದ ರಕ್ಷಣೆ ನೀಡಿತು. ಕೇಂದ್ರ ಸರ್ಕಾರವು 2025ರ ಆರಂಭದಲ್ಲೇ ನಾಗರಿಕ ಸೇವಾ ಪರೀಕ್ಷೆಯ ನಿಯಮಗಳನ್ನು ಪರಿಷ್ಕರಿಸಿ ಪ್ರಮಾಣಪತ್ರಗಳ ಕಡ್ಡಾಯ ಸಲ್ಲಿಕೆಗೆ ಆದೇಶಿಸಿತು. ಸೆಪ್ಟೆಂಬರ್ನಲ್ಲಿ ಖೇಡ್ಕರ್ ಅವರ ಹೆತ್ತವರ ವಿರುದ್ಧ ಅಪಹರಣದ ಪ್ರಕರಣ ದಾಖಲಾಯಿತು

* ಮಾರ್ಚ್ನಲ್ಲಿ ಹೋಳಿ ಹಬ್ಬದ ಆಚರಣೆ ಮತ್ತು ರಂಜಾನ್ ಮಾಸದಲ್ಲಿ ಶುಕ್ರವಾರದ ನಮಾಜ್ ಸಮಯವು ಏಕಕಾಲಕ್ಕೆ ಬಂದಿದ್ದರಿಂದ, ಸಂಘರ್ಷ ತಪ್ಪಿಸಲು ನಮಾಜ್ ಸಮಯವನ್ನು ಮುಂದೂಡುವಂತೆ ಉತ್ತರ ಪ್ರದೇಶದ ಆಡಳಿತವು ನೀಡಿದ ಸೂಚನೆ ಕೂಡ ವಿವಾದವಾಯಿತು

* ಯೋಗ ಗುರು ರಾಮದೇವ್ ಅವರು ಪತಂಜಲಿಯ ಗುಲಾಬ್ ಶರಬತ್ತಿನ ಬಗ್ಗೆ ಪ್ರಚಾರ ಮಾಡುವಾಗ, ಹಮ್ದರ್ದ್ ಸಂಸ್ಥೆಯ ರೂಹ್ ಅಫ್ಜಾ ಪಾನೀಯದ ಲಾಭವು ಮಸೀದಿ ಮತ್ತು ಮದರಸಾಗಳ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.