ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ವರ್ಷದಲ್ಲಿ ಮಾಡಿದ್ದೇನು? ಅಚ್ಛೇ ದಿನ್ ಎಲ್ಲಿದೆ: ಮೋದಿ ಭಾಷಣಕ್ಕೆ ಸಿಬಲ್ ಟೀಕೆ

Published 16 ಆಗಸ್ಟ್ 2023, 5:36 IST
Last Updated 16 ಆಗಸ್ಟ್ 2023, 5:36 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಾತಂತ್ರ್ಯೋತ್ಸವದ ಭಾಷಣವನ್ನು ರಾಜ್ಯಸಭೆ ಸಂಸದ ಕಪಿಲ್‌ ಸಿಬಲ್‌ ಟೀಕೆ ಮಾಡಿದ್ದಾರೆ.

ಭ್ರಷ್ಟಾಚಾರವನ್ನು ತೊಡೆದುಹಾಕಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಉಲ್ಲೇಖಿಸಿರುವ ಸಿಬಲ್‌ ಅವರು, ‘ಸುಮಾರು ಹತ್ತು ವರ್ಷಗಳೇ ಆದವು. ಭ್ರಷ್ಟಾಚಾರ ನಿರ್ಮೂಲನೆಗೆ ನೀವು ಮಾಡಿದ್ದೇನು? ಅಚ್ಛೇ ದಿನ್‌ ಎಲ್ಲಿದೆ’ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ‘ಭ್ರಷ್ಟಾಚಾರವನ್ನು ನಾವು ತೊಡೆದುಹಾಕಬೇಕು ಎಂದು ಆಗಸ್ಟ್‌ 15ರ ಭಾಷಣದಲ್ಲಿ ಹೇಳಿದ್ದೀರಿ. ಸುಮಾರು 10 ವರ್ಷಗಳ ಕಳೆದವು. ಆಗಿದ್ದೇನು? ಅಚ್ಛೇ ದಿನ್‌ ಎಲ್ಲಿದೆ? ಮರೆತು ಹೋಯಿತೇ? ಆಮದಾಗಿದ್ದು ಹಣದುಬ್ಬರ, ನಮ್ಮ ತರಕಾರಿಗಳಲ್ಲ’ ಎಂದು ಹೇಳಿದ್ದಾರೆ.

‘ಮುಂದಿನ ಐದು ವರ್ಷ ಸುವರ್ಣಯುಗವಂತೆ. ಯಾರಿಗೆ? ಬಡವರಿಗಾ? ದಲಿತರಿಗಾ? ಅಲ್ಪಸಂಖ್ಯಾತರಿಗಾ?’ ಎಂದು ಸಿಬಲ್‌ ಪ್ರಶ್ನೆ ಮಾಡಿದ್ದಾರೆ.

ಯುಪಿಎ 1 ಹಾಗೂ 2ರ ಅವಧಿಯಲ್ಲಿ ಕೇಂದ್ರದಲ್ಲಿ ಸಚಿವರಾಗಿದ್ದ ಕಪಿಲ್‌ ಸಿಬಲ್‌, ಕಾಂಗ್ರೆಸ್‌ ತೊರೆದು ಸದ್ಯ ಸಮಾಜವಾದಿ ಪಕ್ಷದ ಬೆಂಬಲದಿಂದ ರಾಜ್ಯಸಭೆಯ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT