ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಶ್ಮೀರಿಗರ ಕೈಯಲ್ಲಿ ಈಗ ಪಿಸ್ತೂಲ್ ಬದಲು ಲ್ಯಾಪ್‌ಟಾಪ್ ಇದೆ: ರಾಜನಾಥ್ ಸಿಂಗ್

Published : 8 ಸೆಪ್ಟೆಂಬರ್ 2024, 9:39 IST
Last Updated : 8 ಸೆಪ್ಟೆಂಬರ್ 2024, 9:39 IST
ಫಾಲೋ ಮಾಡಿ
Comments

ಜಮ್ಮು: ‘370ನೇ ವಿಧಿಯಡಿ ಇದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮಹತ್ತರ ಬದಲಾವಣೆಗಳಾಗಿದ್ದು, ಪಿಸ್ತೂಲ್ ಮತ್ತು ರಿವಾಲ್ವರ್‌ಗಳ ಬದಲಿಗೆ ಯುವಕರು ಲ್ಯಾಪ್‌ಟಾಪ್‌ ಮತ್ತು ಕಂಪ್ಯೂಟರ್‌ಗಳನ್ನು ಒಯ್ಯುತ್ತಿದ್ದಾರೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಬಿಜೆಪಿ ಅಭ್ಯರ್ಥಿ ರಾಕೇಶ್ ಸಿಂಗ್ ಠಾಕೂರ್ ಅವರ ಪರವಾಗಿ ರಾಂಬನ್‌ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸಲು ಕಾಂಗ್ರೆಸ್‌–ಎನ್‌ಸಿ ಮೈತ್ರಿಕೂಟ ಯತ್ನಿಸುತ್ತಿದ್ದು, ಬಿಜೆಪಿ ಇರುವವರೆಗೂ ಅದು ಸಾಧ್ಯವಿಲ್ಲ’ ಎಂದರು.

‘ಜಮ್ಮು–ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಬಿಜೆಪಿಯನ್ನು ಬೆಂಬಲಿಸಬೇಕಿದೆ. ಇದರಿಂದ ಈ ಭಾಗದಲ್ಲಿ ಬೃಹತ್ ಅಭಿವೃದ್ಧಿ ಕೆಲಸಗಳನ್ನು ಮಾಡಲು ಅನುಕೂಲವಾಗುತ್ತದೆ. ಇಲ್ಲಿನ ಬದಲಾವಣೆಯನ್ನು ಕಂಡು ಪಿಒಕೆ ಜನರು ಪಾಕಿಸ್ತಾನ ಬೇಡ ಭಾರತಕ್ಕೆ ಸೇರುತ್ತೇವೆ ಎನ್ನಬೇಕು’ ಎಂದು ಹೇಳಿದರು.

‘ಪಾಕಿಸ್ತಾನವು ನಿಮ್ಮನ್ನು(ಪಿಒಕೆ ಭಾಗದ ಜನರನ್ನು) ಪರಕೀಯರಂತೆ ಪರಿಗಣಿಸುತ್ತದೆ. ಆದರೆ ಭಾರತದಲ್ಲಿನ ಜನರು ನಿಮ್ಮನ್ನು ಹಾಗೆ ನೋಡುವುದಿಲ್ಲ. ನಾವು ನಿಮ್ಮನ್ನು ನಮ್ಮವರೆಂದು ಪರಿಗಣಿಸುತ್ತೇವೆ. ಆದ್ದರಿಂದ ನೀವು ನಮ್ಮೊಂದಿಗೆ ಬಂದು ಸೇರಿಕೊಳ್ಳಿ’ ಎಂದು ಪಿಒಕೆ ಜನರಲ್ಲಿ ಮನವಿ ಮಾಡಿದರು.

ರಾಂಬನ್ ಕ್ಷೇತ್ರದಿಂದ ಅರ್ಜುನ್ ಸಿಂಗ್ ಅವರನ್ನು ಎನ್‌ಸಿ(ನ್ಯಾಷನಲ್ ಕಾನ್ಫರನ್ಸ್‌) ಕಣಕ್ಕಿಳಿಸಿದೆ. ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸೂರಜ್ ಸಿಂಗ್ ಅವರೂ ಕಣದಲ್ಲಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿ ರಾಂಬನ್ ಕ್ಷೇತ್ರದಿಂದ ಬಿಜೆಪಿಯ ನೀಲಂ ಕುಮಾರ್ ಲಾಂಗೆ ಸ್ಪರ್ಧಿಸಿ ಗೆದ್ದಿದ್ದು, ಈ ಬಾರಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT