ವರ್ಗಾವಣೆ ಮತ್ತು ಉಳಿದು ಕೊಳ್ಳುವ ಸ್ಥಳಗಳನ್ನು ತೀರ್ಮಾನಿಸುವಲ್ಲಿ ವಿಶೇಷ ಅಗತ್ಯವನ್ನು ಪರಿಗಣಿಸುತ್ತಿರಲಿಲ್ಲ ಎಂದು ಕೇಂದ್ರ ನೌಕರರು ಹಲವು ದಶಕಗಳಿಂದ ದೂರುತ್ತಿದ್ದರು. ಆದರೆ ಇದೀಗ ಸರ್ಕಾರದ ಆದೇಶದಿಂದ ಸ್ವಲ್ಪಮಟ್ಟಿಗೆ ನಿಟ್ಟಿಸಿರು ಬಿಡುವಂತಾಗಿದೆ.
ಕೇಂದ್ರ ಸರ್ಕಾರದ ಸಚಿವಾಲಯ, ಇಲಾಖೆಗಳಲ್ಲಿ ದೈಹಿಕ ಅಂಗವೈಕಲ್ಯ, ಕಿವುಡು ಮತ್ತು ಕುರುಡು ತೊಂದರೆ ಇರುವ ಸುಮಾರು 15,747 ನೌಕರರರು ಕೆಲಸ ಮಾಡುತ್ತಿದ್ದಾರೆ ಎಂದು ಸಿಬ್ಬಂದಿ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿ ಅಂಶ ತಿಳಿಸಿದೆ.ಹುದ್ದೆ ಗುರುತಿಸುವಿಕೆ, ನೇಮಕ ಮತ್ತು ಪದೋನ್ನತಿ ಮುನ್ನ ತರಬೇತಿ, ನೆರವು ಉಪಕರಣ ಒದಗಿಸುವಿಕೆ, ವರ್ಗಾವಣೆ ಹಾಗೂ ನೇಮಕದಲ್ಲಿ ಆದ್ಯತೆ, ವಿಶೇಷ ರಜಾ ಸೌಲಭ್ಯ ಮತ್ತಿತರರ ಸೌಲಭ್ಯ ಒದಗಿಸು ವಲ್ಲಿ ಗಮನ ನೀಡಲಾಗುವುದು ಎಂದು ಸಿಬ್ಬಂದಿ ಸಚಿವಾಲಯ ಸೋಮವಾರ ಹೊರಡಿಸಿದ ಆದೇಶ ತಿಳಿಸಿದೆ.
ಅಂಗವಿಕಲರಿಗೆ ಕೆಲಸ ಮಾಡುವ ಸ್ಥಳದ ಸಮೀಪದಲ್ಲಿಯೇ ವಸತಿ ಸೌಲಭ್ಯ ಒದಗಿಸುವುದು ಹಾಗೂ ನೆಲ ಮಹ ಡಿಯ ಮನೆಗಳನ್ನೇ ನೀಡುವಲ್ಲಿಯೂ ಇಲಾಖೆ ಕ್ರಮ ಕೈಗೊಳ್ಳಲಿದೆ. ಅತಿ ಹೆಚ್ಚು ಉದ್ಯೋಗಾವಕಾಶ ಇರುವ ಬಿ, ಸಿ ಮತ್ತು ಡಿ ಗ್ರೂಪ್ಗಳಲ್ಲಿ ಸುಲಭವಾಗಿ ಮಾಡಬಹುದಾದ ಕೆಲಸಗಳು ಯಾವು ಎಂಬುದನ್ನು ಗುರುತಿಸುವಂತೆ ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯ ಮತ್ತು ಇಲಾಖೆಗಳಿಗೆ ತಿಳಿಸಲಾಗಿದೆ.