ಘಟನೆಗೆ ಸಂಬಂಧಿಸಿದಂತೆ ಲಖನೌ ವಲಯದ ಐಜಿ ಸತೀಶ್ ಗಣೇಶ್ ಕ್ರಮ ಕೈಗೊಂಡಿದ್ದಾರೆ. ರಜಿನಿ ಬಾಲಾ ಸಿಂಗ್, ಡೈಸಿ ಸಿಂಗ್ ಎಂಬ ಇಬ್ಬರು ಮಹಿಳಾ ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಿದ್ದು, ಮೂರನೇ ಕಾನ್ಸ್ಟೆಬಲ್ ವಿರುದ್ಧ ತನಿಖೆಗೆ ಅದೇಶಿಸಿದ್ದಾರೆ.
ಅಲಹಾಬಾದ್– ಲಖನೌ ಮಾರ್ಗವಾಗಿ ಸಂಚಾರಿಸುವ ಗಂಗಾ ಗೋಮತಿ ಎಕ್ಸ್ಪ್ರೆಸ್ ರೈಲಿನಲ್ಲಿ ಇಬ್ಬರು ದುಷ್ಕರ್ವಿುಗಳು 45 ವರ್ಷದ ಮಹಿಳೆಗೆ ಬಲವಂತವಾಗಿ ಆಸಿಡ್ ಕುಡಿಸಿ, ಅತ್ಯಾಚಾರ ವೆಸಗಿದ್ದರು.
ಸಂತ್ರಸ್ಥ ಮಹಿಳೆ ತನ್ನ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಲಖನೌ ರೈಲು ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು. ನಂತರ ರೈಲ್ವೆ ಪೊಲೀಸರು ಸಂತ್ರಸ್ಥ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.