ನವದೆಹಲಿ (ಪಿಟಿಐ): ಕಪ್ಪುಹಣದ ಸಮಸ್ಯೆ ಹಾಗೂ ತೆರಿಗೆ ಕಳ್ಳತನ ತಪ್ಪಿಸುವ ಉದ್ದೇಶದಿಂದ ಭಾರತ ಬುಧವಾರ ಐದು ದೇಶಗಳೊಂದಿಗೆ ಆರ್ಥಿಕ ಮಾಹಿತಿ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿದೆ.
ಪ್ಯಾರಿಸ್ನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಆಸ್ಟ್ರೇಲಿಯಾ, ಕೆನಡಾ, ಕೋಸ್ಟರಿಕಾ, ಇಂಡೋನೇಷ್ಯಾ ಹಾಗೂ ನ್ಯೂಜಿಲೆಂಡ್ ಇತರ ಐದು ದೇಶಗಳು. ಇದರಿಂದಾಗಿ ಸ್ವಿಟ್ಜರ್ಲೆಂಡ್ ಸೇರಿದಂತೆ ಒಟ್ಟು 60 ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿದಂತೆ ಆಗಿದೆ. ಫ್ರಾನ್ಸ್ನಲ್ಲಿ ಭಾರತದ ರಾಯಭಾರಿಯಾಗಿರುವ ಮೋಹನ್ ಕುಮಾರ್ ಭಾರತದ ಪರವಾಗಿ ಸಹಿ ಮಾಡಿದರು.