ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರೀತಿಯ ಬಗ್ಗೆ ಮಾತನಾಡಲು ಪದಗಳಿಲ್ಲ, ಒಳ್ಳೆಯ ಸಮಯ ಬಂದಾಗ ಭೇಟಿಯಾಗೋಣ: ರಜನಿಕಾಂತ್‌

Last Updated 29 ಮಾರ್ಚ್ 2017, 13:52 IST
ಅಕ್ಷರ ಗಾತ್ರ

ಚೆನ್ನೈ: ಶ್ರೀಲಂಕಾ ಪ್ರವಾಸವನ್ನು ರದ್ದುಪಡಿಸಿದ್ದ ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ಶ್ರೀಲಂಕಾ ತಮಿಳರಿಗೆ ಪತ್ರ ಬರೆದು ಧನ್ಯವಾದ ಹೇಳಿದ್ದಾರೆ.

‘ನೀವು ನನ್ನ ಮೇಲಿಟ್ಟಿರುವ ಪ್ರೀತಿಯ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ನಿಮ್ಮ ಪ್ರೀತಿಯ ಬಗ್ಗೆ ಮಾತನಾಡಲು ನನ್ನಲ್ಲಿ ಪದಗಳಿಲ್ಲ. ಆದರೆ ಯಾವಾಗಲೂ ಒಳ್ಳೆಯದೇ ಆಗಲಿದೆ ಎಂಬುದರಲ್ಲಿ ನಂಬಿಕೆ ಇಡೋಣ. ನಾನು ನಿಮ್ಮನ್ನು ಭೇಟಿ ಮಾಡುವ ಒಳ್ಳೆ ಸಮಯ ಬಂದೇ ಬರುತ್ತದೆ. ನಾನು ದೇವರಲ್ಲಿ ನಿಮ್ಮ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದು ರಜನಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶ್ರೀಲಂಕಾದಲ್ಲಿ ಕಳೆದ ಮೂರು ದಶಕಗಳಿಂದ ನಡೆಯುತ್ತಿರುವ ನಾಗರೀಕ ಯುದ್ಧಗಳ ಪರಿಣಾಮವಾಗಿ ನಿರಾಶ್ರಿತರಾಗಿರುವ ತಮಿಳು ಮೂಲದವರಿಗಾಗಿ ‘ಜ್ಞಾನಂ ಫೌಂಡೇಷನ್‌’ ವತಿಯಿಂದ 150 ಮನೆಗಳನ್ನು ನಿರ್ಮಿಸಲಾಗಿತ್ತು. ಅವುಗಳನ್ನು ವಿತರಿಸುವ ಕಾರ್ಯಕ್ರಮದ ನಿಮಿತ್ತ ನಟ ರಜನಿಕಂತ್‌ ಪ್ರವಾಸಕ್ಕೆ ದಿನಾಂಕ ನಿಗದಿ ಪಡಿಸಿದ್ದರು.

ಆದರೆ, ಕೆಲ ದಿನಗಳ ಹಿಂದೆ ರಜನಿ ಶ್ರೀಲಂಕಾಗೆ ಕೈಗೊಂಡಿದ್ದ ಪ್ರವಾಸವನ್ನು  ವಿರೋಧಿಸಿ ತಮಿಳುನಾಡಿನ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT