ನವದೆಹಲಿ (ಐಎಎನ್ಎಸ್): ದೆಹಲಿ ವಿಶ್ವವಿದ್ಯಾನಿಲಯವು ಪದವಿ ಕೋರ್ಸ್ನ ಅವಧಿಯನ್ನು ಈ ಮೊದಲು ಇದ್ದಂತೆ ಮುಂದುವರೆಸುವುದಾಗಿ ಗುರುವಾರ ವಿಶ್ವ ವಿದ್ಯಾನಿಲಯ ಧನಸಹಾಯ ಆಯೋಗಕ್ಕೆ (ಯುಜಿಸಿ) ತಿಳಿಸಿದೆ.
ದೆಹಲಿ ವಿಶ್ವವಿದ್ಯಾನಿಲಯವು ಪದವಿ ಕೋರ್ಸ್ನ್ನು ನಾಲ್ಕು ವರ್ಷದ ಅವಧಿಗೆ ವಿಸ್ತರಣೆ ಮಾಡಿದ ಕಾರಣ ಈ ವಿವಾದ ಉಂಟಾಗಿತ್ತು.
‘ಇಂದು ನಾವು ಈ ನಿರ್ಧಾರದ ಬಗ್ಗೆ ಯುಜಿಸಿಗೆ ಪ್ರಸ್ತಾವನೆ ಕಳುಹಿಸಿದ್ದು, ಅದರ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ’ ಎಂದು ವಿಶ್ವವಿದ್ಯಾನಿಲಯದ ಮಾಧ್ಯಮ ಸಂಯೋಜಕರೊಬ್ಬರು ತಿಳಿಸಿದ್ದಾರೆ.