ಅಹಮದಾಬಾದ್ (ಪಿಟಿಐ): ಪಾಕಿಸ್ತಾನದಿಂದ ವಲಸೆ ಬಂದು ಕೆಲ ವರ್ಷಗಳಿಂದ ಗುಜರಾತ್ನಲ್ಲಿ ನೆಲೆಸಿರುವ 400ಕ್ಕೂ ಹೆಚ್ಚು ಹಿಂದೂ ಕುಟುಂಬಗಳು ಭಾರತೀಯ ಪೌರತ್ವ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿವೆ.
ಪಾಕಿಸ್ತಾನ ವಲಸಿಗರ ಬೇಡಿಕೆ ಮೇರೆಗೆ ಕೇಂದ್ರ ಗೃಹ ಸಚಿವಾಲಯ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ಎರಡು ದಿನಗಳ ಶಿಬಿರ ಆಯೋಜಿಸಿತ್ತು. ಭಾರತೀಯ ಪೌರತ್ವ ಕೋರಿ ಅರ್ಜಿ ಸಲ್ಲಿಸಿದವರಲ್ಲಿ ಪಾಕಿಸ್ತಾನದ ಎರಡು ಮುಸ್ಲಿಂ ಕುಟುಂಬದವರು ಹಾಗೂ 28 ಅಲ್ಪಸಂಖ್ಯಾತ ಸಮುದಾಯದವರು ಸೇರಿದ್ದಾರೆ. ಈ ಪೈಕಿ ಕೆಲವು ಅರ್ಜಿಗಳನ್ನು ಮಾತ್ರ ಪೌರತ್ವಕ್ಕಾಗಿ ಪರಿಗಣಿಸಲಾಗಿದೆ ಎನ್ನಲಾಗಿದೆ.