ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಹುದ್ದೆ ಬಯಸಿದ್ದೆ: ಪ್ರಣವ್

Last Updated 13 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಸೋನಿಯಾ ಗಾಂಧಿ ಅವರು 2012ರ ರಾಷ್ಟ್ರಪತಿ ಚುನಾವಣೆಗೆ ಮನಮೋಹನ್ ಸಿಂಗ್ ಅವರನ್ನು ಯುಪಿಎ ಅಭ್ಯರ್ಥಿಯಾಗಿ ಘೋಷಿಸಬಹುದು ಮತ್ತು ನನ್ನನ್ನು ಪ್ರಧಾನಿಯಾಗಿ ಆಯ್ಕೆ ಮಾಡಬಹುದು ಎಂದು ನಾನು ಯೋಚಿಸಿದ್ದೆ’ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ತಮ್ಮ ಹಳೆಯ ಆಸೆಯನ್ನು ಈಗ ಬಿಚ್ಚಿಟ್ಟಿದ್ದಾರೆ.

ತಮ್ಮ ಆತ್ಮಕಥೆಯ ಮೂರನೇ ಭಾಗ ‘ದಿ ಕೊಯಲಿಷನ್ ಇಯರ್ಸ್: 1996–2012’ ಬಿಡುಗಡೆ ಮಾಡಿ ಮಾತನಾಡಿದ ಅವರು ಹಿಂದೆ ಕಾಂಗ್ರೆಸ್‌ ಮೊಗಸಾಲೆಯಲ್ಲಿ ನಡೆದಿದ್ದ ಅನೇಕ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡರು.

‘2012ರ ರಾಷ್ಟ್ರಪತಿ ಚುನಾವಣೆಗೂ ಮುನ್ನ ಜೂನ್ 2ರಂದು ನನ್ನ ಜತೆ ಮಾತನಾಡಿದ್ದ ಸೋನಿಯಾ ಗಾಂಧಿ ಅವರು ‘ಅತ್ಯುನ್ನತ ಪದವಿಗೆ ನೀವು ಸರಿಹೊಂದುವಿರಿ’ ಎಂದು ಹೇಳಿದ್ದರು ಎಂದು ತಿಳಿಸಿದರು.

‘ಯುಪಿಎ ಮಿತ್ರ ಪಕ್ಷದ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಪತಿ ಹುದ್ದೆಗೆ ನನ್ನನ್ನು ಮತ್ತು ಉಪರಾಷ್ಟ್ರಪತಿ ಹುದ್ದೆಗೆ ಹಮೀದ್ ಅನ್ಸಾರಿ ಅವರ ಹೆಸರನ್ನು ಸೂಚಿಸಿದ್ದರು. ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅವರು ಎ.ಪಿ.ಜೆ ಅಬ್ದುಲ್ ಕಲಾಂ, ಮನಮೋಹನ್ ಸಿಂಗ್ ಮತ್ತು ಸೋಮನಾಥ ಚಟರ್ಜಿ ಅವರ ಹೆಸರನ್ನು ಪ್ರಸ್ತಾಪಿಸಿದ್ದರು’ ಎಂದು ಮುಖರ್ಜಿ ಹೇಳಿಕೊಂಡರು.

‘ಜೂನ್ 14ರಂದು ಸೋನಿಯಾ ಅವರು ನಿಮ್ಮನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆ’ ಎಂದು ತಿಳಿಸಿದರು. 2008ರಲ್ಲಿ ಮುಂಬೈ ದಾಳಿಯ ನಂತರ ಗೃಹ ಸಚಿವನ ಹುದ್ದೆಗೆ ಶಿವರಾಜ್ ಪಾಟೀಲ್ ರಾಜೀನಾಮೆ ನೀಡಿದ್ದರು. ಆ ಹುದ್ದೆಗೆ ನನ್ನನ್ನು ಆಯ್ಕೆ ಮಾಡಲು ಸೋನಿಯಾ ಮುಂದಾಗಿದ್ದರು. ಆದರೆ, ಮನಮೋಹನ್ ಸಿಂಗ್ ಅವರ ಮಧ್ಯಪ್ರವೇಶದಿಂದ ನನಗೆ ಆ ಹುದ್ದೆ ಕೈತಪ್ಪಿತು ಮತ್ತು ಪಿ.ಚಿದಂಬರಂ ಗೃಹಸಚಿವರಾದರು’ ಎಂದು ಮುಖರ್ಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT