ಶಿಲ್ಲಾಂಗ್ (ಪಿಟಿಐ): ಮೇಘಾಲಯದಲ್ಲಿ ಸತತ 36 ಗಂಟೆಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ 24 ಜನರು ಮೃತಪಟ್ಟಿದ್ದು, ಇನ್ನೂ 24 ಜನರು ಸಾವನ್ನಪ್ಪಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, 20 ಸಾವಿರಕ್ಕಿಂತ ಅಧಿಕ ಜನರನ್ನು ನಿರಾಶ್ರಿತ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಗಾರೊ ಗುಡ್ಡಗಾಡು ಪ್ರದೇಶದ ಕನಿಷ್ಠ ಮೂರು ಜಿಲ್ಲೆಗಳನ್ನು ಹೆಚ್ಚು ಹಾನಿಗೊಳಗಾದ ಪ್ರದೇಶ ಎಂದು ಘೋಷಿಸಲಾಗಿದೆ. ಪಶ್ಚಿಮ ಗಾರೊ ಗುಡ್ಡಗಾಡು ಪ್ರದೇಶದಲ್ಲಿ ಮಂಗಳವಾರ ಮೂವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.