ಭುವನೇಶ್ವರ(ಐಎಎನ್ಎಸ್): ಒಡಿಶಾ ರಾಜ್ಯದಾದ್ಯಂತ ತಾಪಮಾನ 40 ಡಿಗ್ರಿ ಸೆಲ್ಸಿಯಸ್ಗೂ ಹೆಚ್ಚಾಗಿರುವ ಕಾರಣ ಎಲ್ಲಾ ಶಾಲೆಗಳನ್ನು ಬೆಳಗಿನ ಸಮಯದಲ್ಲೇ ನಡೆಸಲು ನಿರ್ಧರಿಸಲಾಗಿದೆ. ‘ಸರ್ಕಾರದ ನಿರ್ದೇಶನದಂತೆ ಎಲ್ಲಾ ಶಾಲೆಗಳನ್ನು ಬುಧವಾರದಿಂದ ಬೆಳಿಗ್ಗೆಯಿಂದಲೇ ಆರಂಭಿಸಲಾಗಿದೆ.
ಇದರ ಪ್ರಕಾರ ಶಾಲೆಗಳು ಬೆಳಿಗ್ಗೆ 6 ರಿಂದ 10.30ರವರೆಗೆ ಕಾರ್ಯನಿರ್ವಹಿಸಲಿವೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ರಾಜ್ಯದ ಪ್ರಮುಖ ಐದು ನಗರಗಳಲ್ಲಿ ಮಂಗಳವಾರ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಉಳಿದ ನಗರ, ಪಟ್ಟಣಗಳಲ್ಲಿಯೂ ಇದೇ ಪರಿಸ್ಥಿತಿ ಇದೆ.