ಜಮ್ಮು(ಐಎಎನ್‌ಎಸ್): ಭಾರತದ ಸೇನಾ ನೆಲೆಗಳ ಮೇಲೆ ಪಾಕ್ ಯೋಧರು ಶುಕ್ರವಾರ ರಾತ್ರಿ ಗುಂಡಿನ ದಾಳಿ ನಡೆಸಿ, ಕದನವಿರಾಮ ಉಲ್ಲಂಘಿಸಿದ್ದಾರೆ.

‘ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್ ಬಳಿ ಪಾಕ್ ಯೋಧರು ಶುಕ್ರವಾರ ಸಂಜೆ 7.35ಕ್ಕೆ ಗುಂಡಿನ ದಾಳಿ ನಡೆಸಿದರು. ಈ ಗುಂಡಿನ ದಾಳಿಯಲ್ಲಿ ಯಾವುದೇ ಹಾನಿ ಅಥವಾ ಗಾಯಗಳಾಗಿಲ್ಲ’ ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ಮನೀಶ್ ಮೆಹ್ತಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಪಾಕ್ ಯೋಧರು ಸಣ್ಣ ಪ್ರಮಾಣದ ಮತ್ತು ಸ್ವಯಂಚಾಲಿತ ಬಂದೂಕುಗಳನ್ನು ಬಳಸಿ ಗುಂಡಿನ ದಾಳಿ ಮಾಡಿದರು. ಇದಕ್ಕೆ ಪ್ರತಿಯಾಗಿ ಭಾರತದ ಯೋಧರು ಸಹ ಗುಂಡಿನ ಉತ್ತರ ನೀಡಿದರು’ ಎಂದು ಮೆಹ್ತಾ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.