ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಸೂಪರ್‌ ಕಂಪ್ಯೂಟರ್‌ ಖರೀದಿ

ಹವಾಮಾನ ಮುನ್ಸೂಚನೆ ಮಾಹಿತಿಗೆ ಅನುಕೂಲ: 8 ಪಟ್ಟು ಹೆಚ್ಚು ಸಾಮರ್ಥ್ಯ
Last Updated 9 ಜೂನ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹವಾಮಾನ ಮುನ್ಸೂಚನೆಯನ್ನು ಮತ್ತಷ್ಟು ಸುಧಾರಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಇನ್ನೂ ಎರಡು ಸೂಪರ್‌ ಕಂಪ್ಯೂಟರ್‌ಗಳನ್ನು ಖರೀದಿಸಲು ಉದ್ದೇಶಿಸಿದೆ.

ಸದ್ಯ ಲಭ್ಯವಿರುವ ಸೂಪರ್‌ ಕಂಪ್ಯೂಟರ್‌ಗಳಿಗಿಂತ ಎಂಟು ಪಟ್ಟು ಹೆಚ್ಚು ಸಾಮರ್ಥ್ಯವನ್ನು ಇವು ಹೊಂದಿವೆ. ಜತೆಗೆ ಅತಿ ಹೆಚ್ಚು ವೇಗದಲ್ಲಿ ಕಾರ್ಯನಿರ್ವಹಿಸಲಿವೆ.

ಭೂ ವಿಜ್ಞಾನ ಖಾತೆ ಸಚಿವ ಹರ್ಷವರ್ಧನ್‌ ಅವರು ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ಬಳಿಕ ಸೂಪರ್‌ ಕಂಪ್ಯೂಟರ್‌ಗಳ ಅಗತ್ಯತೆ ಬಗ್ಗೆ ವಿವರಿಸಲಾಗಿದೆ. ಈ ಕಂಪ್ಯೂಟರ್‌ಗಳಿಂದ ಸಾಧ್ಯವಾದಷ್ಟು ಮುಂಚಿತವಾಗಿಯೇ ಮತ್ತು ನಿಖರವಾಗಿಯೇ ಹವಾಮಾನ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್‌ ತಿಳಿಸಿದ್ದಾರೆ.

ಸದ್ಯ ಎರಡು ಸೂಪರ್‌ ಕಂಪ್ಯೂಟರ್‌ಗಳು: ಸದ್ಯ ಭೂ ವಿಜ್ಞಾನ ಸಚಿವಾಲಯ ಹವಾಮಾನ ಮುನ್ಸೂಚನೆಗಾಗಿ ಎರಡು ಸೂಪರ್ ಕಂಪ್ಯೂಟರ್‌ಗಳನ್ನು ಹೊಂದಿದೆ. ನೊಯಿಡಾದಲ್ಲಿರುವ ಮಧ್ಯಮ ವ್ಯಾಪ್ತಿ ಹವಾಮಾನ ಮುನ್ಸೂಚನೆ ರಾಷ್ಟ್ರೀಯ ಕೇಂದ್ರ (ಎನ್‌ಸಿಎಂಆರ್‌ಡಬ್ಲ್ಯೂಎಫ್‌) ಮತ್ತು ಪುಣೆಯಲ್ಲಿರುವ ಭಾರತೀಯ ಉಷ್ಣವಲಯ ಹವಾಮಾನ
ಸಂಸ್ಥೆಯಲ್ಲಿ (ಐಐಟಿಎಂ) ಈ ಕಂಪ್ಯೂಟರ್‌ಗಳಿವೆ. ಈ ಎರಡು ಕಂಪ್ಯೂಟರ್‌ಗಳ ಒಟ್ಟು ಸಾಮರ್ಥ್ಯ ಕೇವಲ 10 ಪೆಟಾಫ್ಲಾಪ್ಸ್‌. ಈ ಸಂಸ್ಥೆಗಳಲ್ಲಿಯೇ ಹೊಸ ಕಂಪ್ಯೂಟರ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT