ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಸುರಕ್ಷತೆಗೆ ಸ್ಮಾರ್ಟ್ ಸಾಧನ ಭಾರತದ ತಂಡಕ್ಕೆ ₹6.70 ಲಕ್ಷ ಪ್ರಶಸ್ತಿ

Last Updated 7 ಜೂನ್ 2018, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಮಹಿಳೆಯರ ಸುರಕ್ಷತೆಗಾಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಯುವಉದ್ಯಮಿಗಳ ತಂತ್ರಜ್ಞಾನ ಸ್ಟಾರ್ಟ್‌ಅಪ್ ‘ಲೀಫ್ ವೇರೆಬಲ್ಸ್‌’, ಧರಿಸಲು ಸಾಧ್ಯವಾಗುವಂತಹ ಸ್ಮಾರ್ಟ್ ಸಾಧನ ಅಭಿವೃದ್ಧಿಪಡಿಸಿದ್ದಕ್ಕಾಗಿ ₹6.70 ಲಕ್ಷ ಮೊತ್ತದ ಪ್ರಶಸ್ತಿ ಗಳಿಸಿದೆ.

ಭಾರತೀಯ ಅಮೆರಿಕನ್ ದಾನಿಗಳಾದ ಅನು ಮತ್ತು ನವೀನ್ ಜೈನ್ ಅವರ 'Women's Safety XPRIZE' ಸಂಸ್ಥೆ ಈ ಪ್ರಶಸ್ತಿ ನೀಡುತ್ತದೆ.

ಮಹಿಳೆಯರು ಈ ಸ್ಮಾರ್ಟ್ ಸಾಧನ ಧರಿಸಿದ್ದರೆ, ದೌರ್ಜನ್ಯ ಅಥವಾ ಬೆದರಿಕೆ ಎದುರಾದ ಸಂದರ್ಭದಲ್ಲಿ ತುರ್ತು ಅಲರ್ಟ್‌ಗಳನ್ನು ರವಾನಿಸಬಹುದು. 

18 ರಾಷ್ಟ್ರಗಳ 85 ತಂಡಗಳಲ್ಲಿ ಆಯ್ಕೆ ಮಾಡಲಾದ ಐದು ತಂಡಗಳ ಅಂತಿಮ ಸುತ್ತಿನಲ್ಲಿ, ಐಐಟಿ ದೆಹಲಿ ಹಾಗೂ ದೆಹಲಿ ತಂತ್ರಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಈ ಸ್ಟಾರ್ಟ್‌ಅಪ್ ಸಹ ಇತ್ತು. ನಿರ್ಭಯಾ ಪ್ರಕರಣದ ಬಳಿಕ ಮಹಿಳೆಯರ ಸುರಕ್ಷತೆಗಾಗಿ ಈ ಸ್ಟಾರ್ಟ್‌ಅಪ್ ಕಾರ್ಯನಿರ್ವಹಿಸುತ್ತಿದೆ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಿದ್ದ ತಂಡಗಳು, ₹2,683 (40 ಡಾಲರ್) ವೆಚ್ಚದ ಒಳಗೆ ಸ್ಮಾರ್ಟ್ ಸಾಧನ ಅಭಿವೃದ್ಧಿಪಡಿಸಬೇಕಿತ್ತು. ಜತೆಗೆ ಅಂತರ್ಜಾಲ ಸಂಪರ್ಕವಿಲ್ಲದೆ, ಯಾರಿಗೂ ತಿಳಿಯದಂತೆ 90 ಸೆಕೆಂಡ್‌ಗಳ ಒಳಗಾಗಿ ತುರ್ತು ಸಂದೇಶ ರವಾನಿಸುವಂತೆ ಇದನ್ನು ರೂಪಿಸಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT