ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಹಮದ್‌ ಅಲಿ ಜಿನ್ನಾ ’ಮಹಾಪುರುಷ’: ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫುಲೆ

Last Updated 11 ಮೇ 2018, 10:13 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫುಲೆ ಅವರು ಪಾಕಿಸ್ತಾನದ ಪಿತಾಮಹ ಮುಹಮದ್‌ ಅಲಿ ಜಿನ್ನಾ ಅವರನ್ನು ‘ಮಹಾಪುರುಷ’ ಎಂದು ಸಂಬೋಧಿಸಿದ್ದಾರೆ.

ಬಿಜೆಪಿ ಶಾಸಕ ಸತೀಶ್‌ ಗೌತಮ್‌ ಎನ್ನುವವರು ವಿದ್ಯಾರ್ಥಿಗಳ ಒಕ್ಕೂಟದ ಕಚೇರಿಯಲ್ಲಿ ಜಿನ್ನಾ ಅವರ ಭಾವಚಿತ್ರವನ್ನು ಹಾಕಿರುವುದು ಏಕೆ? ಎಂದು ಪ್ರಶ್ನಿಸಿ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದರು.

ಈ ಸಂಬಂಧ ಸೃಷ್ಟಿಯಾಗಿರುವ ವಿವಾದ ಕುರಿತು ಮಾತನಾಡಿರುವ ಉತ್ತರಪ್ರದೇಶ ಸಂಸದೆ, 'ಜಿನ್ನಾ ಮಹಾಪುರುಷ. ಅವರು ದೇಶಕ್ಕಾಗಿ ಹೋರಾಡಿದ್ದಾರೆ. ಸಂಸತ್ತಿನ ಗೋಡೆಯ ಮೇಲೆ ಅವರ ಭಾವಚಿತ್ರವಿದೆ. ಅವರನ್ನು ಗೌರವದಿಂದ ನೆನಪಿನಲ್ಲಿಟ್ಟುಕೊಳ್ಳಬೇಕು. ಅಗತ್ಯವಿರುವಲ್ಲಿ ಅವರ ಭಾವಚಿತ್ರಗಳನ್ನು ಇರಿಸಬೇಕು. ದಲಿತರ ಸಮಸ್ಯೆಗಳ ಕುರಿತ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ. ಇದನ್ನು ನಾನು ಒಪ್ಪುವುದಿಲ್ಲ’ ಪ್ರತಿಕ್ರಿಯಿಸಿದ್ದಾರೆ.

‘ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದವರು ಯಾವುದೇ ಜಾತಿ, ಧರ್ಮದ ಹಿನ್ನೆಲೆಯವರಾಗಿರಲಿ. ಅಂತಹವರನ್ನು ಖಂಡಿತ ಗೌರವಿಸಬೇಕು’ ಎಂದೂ ಹೇಳಿದ್ದಾರೆ.

ಸತೀಶ್‌ ಗೌತಮ್‌ ಅವರ ಪತ್ರಕ್ಕೆ ಪ್ರತಿಕ್ರಿಯಿಸಿದ್ದ ವಿವಿ, ‘ಜಿನ್ನಾ ವಿವಿಯ ಸಭಾಂಗಣದ ಸಂಸ್ಥಾಪಕ ಸದಸ್ಯರಾಗಿದ್ದು, ಅವರ ಭಾವಚಿತ್ರ ದಶಕಗಳ ಕಾಲದಿಂದಲೂ ಇದೆ’ ಎಂದಿತ್ತು.

ಸದ್ಯ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಬಳಿಕ ಹಿಂಸಾಚಾರಕ್ಕೂ ತಿರುಗಿತ್ತು.

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಫುಲೆ ಅವರು ಇತ್ತೀಚಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ತಮ್ಮದೇ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಬಿಜೆಪಿ ನಾಯಕರ ‘ದಲಿತರೊಂದಿಗಿನ ಬೋಜನ’ ಕಾರ್ಯಕ್ರಮಕ್ಕೂ ವಿರೋಧ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT