ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವರ್ತನೆ 'ಬಾಲಿಶ', ಪಾಲಿಸಲಿ ಶಿಷ್ಟಾಚಾರ': ಪ್ರಿಯಾಂಕಾ

Last Updated 29 ಏಪ್ರಿಲ್ 2014, 10:41 IST
ಅಕ್ಷರ ಗಾತ್ರ

ಅಮೇಠಿ(ಪಿಟಿಐ): ‘ಸಹೋದರ ರಾಹುಲ್ ಗಾಂಧಿ ಅವರನ್ನು ‘ಶಹಜಾದ’, ‘ನಮೂನೆ’ ಎಂದು ಹೇಳುವ ಮೂಲಕ ಬಿಜೆಪಿಯ ಪ್ರಧಾನಿ ಆಕಾಂಕ್ಷಿ ನರೇಂದ್ರ ಮೋದಿ 'ಬಾಲಿಶ' ವರ್ತನೆ ತೋರುತ್ತಿದ್ದಾರೆ. ಅವರು ಶಿಷ್ಟಾಚಾರ ಪಾಲಿಸಬೇಕು'  ಎಂದು ಪ್ರಿಯಾಂಕಾ ಗಾಂಧಿ ಚುಚ್ಚಿದ್ದಾರೆ.

ಸಲೋನ್ ವಿಧಾನಸಭಾ ಕ್ಷೇತ್ರದ ದೀಹ್ ಪ್ರದೇಶದಲ್ಲಿ ನಡೆದ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ, ಬಿಜೆಪಿ ಮುಖಂಡರು, ನಮ್ಮ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ರಾಷ್ಟ್ರಕ್ಕೆ ಕಂಪ್ಯೂಟರ್ ಅನ್ನು ಪರಿಚಯಿಸಿದಾಗ ಮೂದಲಿಸಿದ್ದರು. ಈಗ ಸಹೋದರ ರಾಹುಲ್ ಗಾಂಧಿಯನ್ನು ಮೂದಲಿಸುತ್ತಿದ್ದಾರೆ ಎಂದು ಹೇಳಿದರು.

‘ರಾಹುಲ್ ಗಾಂಧಿಯನ್ನು ಒಮ್ಮೆ ‘ನಮೂನೆ’ ಎನ್ನುತ್ತಾ, ಕೆಲವೊಮ್ಮೆ ‘ಜೋಕರ್' ಗೆ ಹೋಲಿಸುತ್ತಾ, ಮತ್ತೊಮ್ಮೆ ‘ಶಹಜಾದ’ ಎಂದು ಹೇಳಿಕೆ ನೀಡುತ್ತಿರುವ ಪ್ರಧಾನಿ ಸ್ಥಾನದ ಆಕಾಂಕ್ಷಿ ಮೋದಿ ಅವರು ‘ಬಾಲಿಶ’ ವರ್ತನೆ ತೋರುತ್ತಿದ್ದಾರೆ. ಅವರು ಗಾಂಭೀರ್ಯ ಕಾಯ್ದುಕೊಳ್ಳಬೇಕು' ಎಂದು ರಾಹುಲ್ ಸಹೋದರಿ ಸಲಹೆ ನೀಡಿದರು.

ಚುನಾವಣಾ ಸಂದರ್ಭದಲ್ಲಿ ಮೋದಿ ಅವರು ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರ ಹಿನ್ನೆಲೆಯಲ್ಲಿ ಪ್ರಿಯಾಂಕಾ ಮತ್ತು ಮೋದಿ ಮಧ್ಯೆ ವಾಕ್ಸಮರ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT