ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆ, ಸ್ವಚ್ಛತೆ, ಸುರಕ್ಷೆಗೆ ‘ಸದಾ’ ಆದ್ಯತೆ

Last Updated 8 ಜುಲೈ 2014, 11:34 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸ್ವಚ್ಚತೆ, ಸುರಕ್ಷತೆ  ಜೊತೆಗೆ ಟಿಕೆಟ್‌ ವ್ಯವಸ್ಥೆ ಉನ್ನತೀಕರಣಕ್ಕೆ ಆದ್ಯತೆ.. ಬುಲೆಟ್‌ ರೈಲು ಘೋಷಣೆ.. ಹೊಸ ಯೋಜನೆಗಳು, ಮಾರ್ಗಗಳು, ರೈಲುಗಳು.. ಮುಂದಿನ ಐದು ವರ್ಷಗಳಲ್ಲಿ ಇಲಾಖೆಯ ಕಚೇರಿಗಳನ್ನು ಕಾಗದ ಮುಕ್ತವಾಗಿಸಲು ಚಿಂತನೆ.. ಹೂಡಿಕೆ ಉತ್ತೇಜನಕ್ಕೆ ಕ್ರಮ...ಎಫ್‌ಡಿಎ ಆಕರ್ಷಣೆಗೆ ಉತ್ಸುಕ...

– ಇವು ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ 2014–15ನೇ ಸಾಲಿನ ಬಜೆಟ್‌ನ ಪ್ರಮುಖ ಅಂಶಗಳು..

ಸುರಕ್ಷೆ: ಸದಾನಂದಗೌಡ ಅವರು ಮಂಡಿಸಿದ ತಮ್ಮ ಚೊಚ್ಚಲ ರೈಲ್ವೆ ಬಜೆಟ್‌ನಲ್ಲಿ ಸ್ವಚ್ಛತೆ ಹಾಗೂ ಸುರಕ್ಷೆ ಆದ್ಯತೆ ನೀಡಿದ್ದಾರೆ. ಸ್ವಚ್ಛತೆಯ ಬಗ್ಗೆ ನಿಗಾವಹಿಸಲು ಸಿಸಿಟಿವಿ ಅಳವಡಿಕೆಗೆ ನಿರ್ಧರಿಸಿದ್ದಾರೆ. ರೈಲು ಪ್ರಯಾಣದ ವೇಳೆ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಲು 4 ಸಾವಿರ ಮಹಿಳಾ ಕಾನ್‌ಸ್ಟೇಬಲ್‌ಗಳನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ತ್ವರಿತ ಟಿಕೆಟ್: ರೈಲ್ವೆ ಟಿಕೆಟ್ ಕಾಯ್ದಿರಿಸುವ  ವ್ಯವಸ್ಥೆಯನ್ನು ಉನ್ನತಿಕರಣಗೊಳಿಸಿ ಈಗಿರುವ ಪ್ರತಿ ನಿಮಿಷಕ್ಕೆ 2 ಸಾವಿರ ಟಿಕೆಟ್ ಬುಕ್ಕಿಂಗ್ ಸಾಮರ್ಥ್ಯವನ್ನು ಏಳು ಸಾವಿರಕ್ಕೆ ಹೆಚ್ಚಿಸಲು ಆದ್ಯತೆ ನೀಡಿದ್ದಾರೆ.

ಪ್ರವಾಸೋದ್ಯಮ: ಯಾತ್ರಾ ಸ್ಥಳ ಹಾಗೂ ಇಕೊ ಪ್ರವಾಸೋದ್ಯಮಗಳ ಮೂಲಕ ದೇಶದಲ್ಲಿರುವ ಪ್ರವಾಸೋದ್ಯಮ ಕ್ಷೇತ್ರವನ್ನು ಬಲ ಪಡಿಸಲು ಉದ್ದೇಶಿಸಿಲಾಗಿದೆ ಎಂದು ತಿಳಿಸಿದರು.

ಸುರಕ್ಷೆ: ಮುಂದಿನ ಐದು ವರ್ಷಗಳಲ್ಲಿ ರೈಲ್ವೆ ಕಚೇರಿಗಳಲ್ಲಿ ಕಾಗದ ರಹಿತ ಸೇವೆ ಅನುಷ್ಠಾನಕ್ಕೆ ಯತ್ನಿಸುವುದಾಗಿ ತಿಳಿಸಿದ ಅವರು ಪ್ರಮುಖ ಹತ್ತು ನಿಲ್ದಾಣಗಳನ್ನು ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ಧಿ ಪಡಿಸುವ ಜೊತೆಗೆ  A1 ನಿಲ್ದಾಣಗಳಲ್ಲಿ ವೈಫೈ ಸೇವೆ ನೀಡುವುದಾಗಿ ಹೇಳಿದ್ದಾರೆ.

ಆಹಾರ: ಆಹಾರದ ವಿಷಯಕ್ಕೂ ಆದ್ಯತೆ ನೀಡಲೆತ್ನಿಸಿದ ರೈಲ್ವೆ ಸಚಿವರು,  ಎಸ್ಎಂಎಸ್ ಮೂಲಕವೂ ಆಹಾರ ಬುಕ್ಕಿಂಗ್ ಸೌಲಭ್ಯ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.

ಅಲ್ಲದೆ, ಹಾಲು ಸಾಗಣೆಗೆ ವಿಶೇಷ ಟ್ಯಾಂಕರ್‌ಗಳು, ಹಣ್ಣು ಹಾಗೂ ತರಕಾರಿ ಸಾಗಣೆಗೂ ಎಸಿ ಸಂಗ್ರಹಣದಲ್ಲಿ ಸ್ಥಳಾವಕಾಶ.. ಸರಕು ಶೇಖರಣೆಗೆ ಆಧುನಿಕ ಗೋದಾಮುಗಳ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಪ್ರಕಟಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ಅದಕ್ಷತೆಯ ಫಲವಾಗಿ ಭಾರತೀಯ ರೈಲ್ವೆ ಸೊರಗಿದೆ. 30 ವರ್ಷಗಳಲ್ಲಿ ಘೋಷಣೆ ಮಾಡಲಾದ 676 ಯೋಜನೆಗಳ ಪೈಕಿ 356 ಯೋಜನೆಗಳು ಇನ್ನೂ  ಅಪೂರ್ಣವಾಗಿವೆ. 4 ಯೋಜನೆಗಳು ಒಂದಿಲ್ಲ ಒಂದು ಕಾರಣಕ್ಕಾಗಿ 30 ವರ್ಷಗಳಿಂದ ಕಾದುಕುಳಿತಿವೆ ಎನ್ನುವ ಮೂಲಕ ಪರೋಕ್ಷವಾಗಿ ಯುಪಿಎ ಸರ್ಕಾರದ ಅವಧಿಯತ್ತ ಬೊಟ್ಟು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT