ಕಲಬುರ್ಗಿ: ತಾಲ್ಲೂಕಿನ ಸಾವಳಗಿ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಏಳು ಜನ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.ಭಾನುವಾರ ನಸುಕಿನಲ್ಲಿ ಈ ಅಪಘಾತ ಸಂಭವಿಸಿದೆ.

ಇವರಲ್ಲಿ ಒಬ್ಬ ಗರ್ಭಿಣಿಇರ್ಫಾನಾ ಬೇಗಂ (25) ಸೇರಿ ನಾಲ್ವರು ಮಹಿಳೆಯರು ಹಾಗೂ ಮೂವರು ಪುರುಷರು ಇದ್ದಾರೆ. ಇನ್ನೊಬ್ಬ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಎಲ್ಲರೂ ಆಳಂದದ ನಿವಾಸಿಗಳಾಗಿದ್ದು, ಸಹೋದರ ಸಂಬಂಧಿಕರು.

ಘಟನೆ ವಿವರ: ಇರ್ಫಾನಾ ಅವರಿಗೆ ಭಾನುವಾರ ನಸುಕಿನ 3 ಗಂಟೆಗೆ ಹೆರಿಗೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಕುಟುಂಬದವರು ಆಳಂದದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಅವರಿಗೆ ರಕ್ತದೊತ್ತಡ ತೀವ್ರ ಕಡಿಮೆಯಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿಗೆ ಕರೆದೊಯ್ಯಲು ಅಲ್ಲಿನ ವೈದ್ಯರು ಸೂಚಿಸಿದರು. ತಕ್ಷಣವೇ
ಕುಟುಂಬದವರು ನಸುಕಿನ 4ಕ್ಕೆ ಸಂಬಂಧಿಕರಾದ ಮುನೀರ್ ಅವರ ಕಾರ್ ಮಾಡಿಕೊಂಡು ಕಲಬುರ್ಗಿಯತ್ತ ವೇಗವಾಗಿ ಹೊರಟರು.

ಕಲಬುರ್ಗಿ ತಲುಪಲು ಇನ್ನು 15 ಕಿ.ಮೀ ಅಂತರದಲ್ಲಿ ಸಾವಳಗಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಒಂದೆಡೆ ಲಾರಿ ರಸ್ತೆ ಪಕ್ಕದಲ್ಲಿ ಉರುಳಿ ಬಿದ್ದರೆ, ಮತ್ತೊಂದೆಡೆ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ.

ಅಪಘಾತವಾಗಿ ಎರಡು ತಾಸಿನ ನಂತರವೂ ಶವಗಳನ್ನು ವಾಹನದಿಂದ ಹೊರ ತೆಗೆಯಲು ಸಾಧ್ಯವಾಗಲಿಲ್ಲ. ನಂತರ ಗ್ರಾಮದ ಯುವಕು ಕಾರಿನ ಬಾಗಿಲುಗಳನ್ನು ಮುರಿದು ಶವಗಳನ್ನು ಹೊರತೆಗೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.