ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ವಿಚಾರ ಜೂ.25ಕ್ಕೆ ದೆಹಲಿಯಲ್ಲಿ ಚರ್ಚೆ: ವಿಜಯೇಂದ್ರ

Published 23 ಜೂನ್ 2024, 16:00 IST
Last Updated 23 ಜೂನ್ 2024, 16:00 IST
ಅಕ್ಷರ ಗಾತ್ರ

ಮೈಸೂರು: ‘ಚನ್ನಪಟ್ಟಣ ಕ್ಷೇತ್ರ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಕುರಿತು  ಮಂಗಳವಾರ (ಜೂನ್‌ 25) ನವದೆಹಲಿಗೆ ತೆರಳಿ ಹೈಕಮಾಂಡ್ ಜತೆ ಚರ್ಚಿಸುತ್ತೇನೆ‘ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇಲ್ಲಿ ಹೇಳಿದರು.

‘ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಡುವ ಅಥವಾ ತೆಗೆದುಕೊಳ್ಳವ ಬಗ್ಗೆ ತೀರ್ಮಾನವಾಗಿಲ್ಲ. ಪ್ರಾಥಮಿಕ ಚರ್ಚೆಯೂ ಆಗಿಲ್ಲ. ಎರಡು ಪಕ್ಷದವರು ಸೇರಿ ನಿರ್ಧರಿಸುತ್ತೇವೆ‘ ಎಂದರು.

‘ಕಾಂಗ್ರೆಸ್‌ನಿಂದ ಯಾರಾದರೂ ಸ್ಪರ್ಧಿಸಲಿ. ಯಾರು ಎಷ್ಟೇ ಬಲಾಢ್ಯರಾದರೂ ಜನ ಮನಸ್ಸು ಮಾಡಿದರೆ ಎಂತಹ ಫಲಿತಾಂಶ ಬರುತ್ತದೆ ಎಂಬುದಕ್ಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶ ಸಾಕ್ಷಿ‘ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT