‘ನನ್ನ ಪತಿಗೆ ನಾನು ಸೇರಿ ಇಬ್ಬರು ಪತ್ನಿಯರು. ನಾನು ಎರಡನೇಯವಳು. ಪತಿ ನಿಧನ ಬಳಿಕ ನನ್ನ ಮಕ್ಕಳೊಂದಿಗೆ ನಾನು ಬೇರೆಡೆ ವಾಸವಿದ್ದೇನೆ. ಮೊದಲನೇ ಪತ್ನಿಯ ಮಗ ಆಗಾಗ್ಗೆ ಮನೆಗೆ ಬಂದು ನನ್ನ ಮಗಳ ಮೇಲೆ ಅತ್ಯಾಚಾರ ಮಾಡಿ, ಯಾರಿಗೂ ಹೇಳದಂತೆ ಬೆದರಿಸಿದ್ದಾನೆ. ಇದಕ್ಕೆ ಇನ್ನಿಬ್ಬರಿಂದ ಸಹಕಾರವೂ ಇದೆ’ ಎಂದು ಬಾಲಕಿಯ ತಾಯಿ ದೂರು ನೀಡಿದ್ದಾರೆ.