ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಐಡಿಗೆ ವಂಚಕ ಕಂಪನಿಗಳ ತನಿಖೆ

ಆ್ಯಂಬಿಡೆಂಟ್‌, ಇಂಜಾಜ್‌ ಸೇರಿ 10 ಕಂಪನಿಗಳ ಪ್ರಕರಣಗಳು
Last Updated 29 ಅಕ್ಟೋಬರ್ 2019, 19:00 IST
ಅಕ್ಷರ ಗಾತ್ರ

ಬೆಂಗಳೂರು: ಆ್ಯಂಬಿಡೆಂಟ್‌ ಮಾರ್ಕೆಟಿಂಗ್‌ ಪ್ರೈವೇಟ್‌ ಲಿ. ಹಾಗೂ ಇಂಜಾಜ್‌ ಇಂಟರ್‌ನ್ಯಾಷನಲ್‌ ಕಂಪನಿ
ಗಳು ಸೇರಿದಂತೆ ಸಾವಿರಾರು ಠೇವಣಿದಾರರಿಗೆ ನೂರಾರು ಕೋಟಿ ವಂಚಿಸಿದ ಆರೋಪವಿರುವ 10 ಕಂಪನಿಗಳ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ.

ರಾಜ್ಯದ ಡಿಜಿ ಮತ್ತು ಐಜಿ ಇತ್ತೀಚೆಗೆ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಬರಾಕ್‌ ಯೂನಿಟಿ ಲಿ., ಎಸ್‌.ಆರ್‌. ಬ್ಲೂ ಚಿಪ್ಸ್‌, ಏಮ್ಸ್‌ ವೆಂಚರ್‌, ಅಜ್ಮೀರಾ ಗ್ರೂಪ್‌, ನಫಿಯಾ ಟೂರ್ಸ್‌ ಅಂಡ್‌ ಅಂಡ್‌ ಟ್ರಾವೆಲ್ಸ್‌ ಕಂಪನಿಗಳ ವಂಚನೆ ಪ್ರಕರಣಗಳ ತನಿಖೆಯನ್ನು ಈವರೆಗೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ನಡೆಸಿತ್ತು.

ಆ್ಯಂಬಿಡೆಂಟ್‌ ಮಾರ್ಕೆಟಿಂಗ್‌ ಪ್ರೈವೇಟ್‌ ಲಿ. 10 ಸಾವಿರಕ್ಕೂ ಹೆಚ್ಚು ಠೇವಣಿದಾರರಿಂದ ₹ 100 ಕೋಟಿಗೂ ಅಧಿಕ ಹಣ ಸಂಗ್ರಹಿಸಿ ವಂಚಿಸಿದೆ.ಇಂಜಾಜ್‌ ಇಂಟರ್‌ ನ್ಯಾಷನಲ್‌ ₹ 285 ಕೋಟಿ ವಂಚಿಸಿದೆ. ಇದರಲ್ಲಿ ₹ 185 ಕೋಟಿಯಷ್ಟು ಮರು ಪಾವತಿಯಾಗಿದೆ. ಬಾಕಿ ಹಣ ಹಿಂತಿರುಗಿಸಬೇಕಾಗಿದೆ. ಇವೆರಡೂ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಆಸ್ತಿ ಜಪ್ತಿ ಮಾಡಲಾಗಿದೆ.

ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಠೇವಣಿ ಸಂಗ್ರಹಿಸಿ ವಂಚಿಸಿರುವುದರಿಂದ ಸಿಐಡಿ ಆರ್ಥಿಕ ಅಪರಾಧಗಳ ವಿಭಾಗಕ್ಕೆ ತನಿಖೆ ವಹಿಸಲಾಗಿದೆ. ದೊಡ್ಡ ಮೊತ್ತದ ವಂಚನೆ ಪ್ರಕರಣಗಳ ತನಿಖೆ ವ್ಯಾಪ್ತಿ ಸಿಸಿಬಿಗೆ ಇಲ್ಲದಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ, ರಾಜ್ಯದಾದ್ಯಂತ ಹಾಗೂ ಹೊರ ರಾಜ್ಯಗಳಲ್ಲೂ ಕೆಲವು ಕಂಪನಿಗಳು ವ್ಯವಹಾರ ನಡೆಸಿವೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ವರ್ಷದಿಂದೀಚೆಗೆ ವಂಚನೆ ಪ್ರಕರಣಗಳು ಬಯಲಿಗೆ ಬಂದಿದ್ದು, ಅಂದಿನಿಂದಲೂ ತನಿಖೆಯನ್ನು ಸಿಸಿಬಿ ಅಧಿಕಾರಿಗಳೇ ನಡೆಸಿದ್ದರು. ಸಂದೀಪ್‌ ಪಾಟೀಲ ಸಿಸಿಬಿ ಜಂಟಿ ಕಮಿಷನರ್‌ ಆಗಿ ಬಂದ ಬಳಿಕ ಈ ಪ್ರಕರಣಗಳ ತನಿಖೆ ಪ್ರಗತಿ ಪರಿಶೀಲಿಸಿದ್ದರು. ಆ ನಂತರ, ಅವುಗಳ ತನಿಖೆಯನ್ನು ಸಿಐಡಿ ಆರ್ಥಿಕ ಅಪರಾಧಗಳ ವಿಭಾಗಕ್ಕೆ ವಹಿಸುವಂತೆ ಶಿಫಾರಸು ಮಾಡಿದ್ದರು.

ಸಿಸಿಬಿ ಹಾಗೂ ಸಿಐಡಿ ಅಧಿಕಾರಿಗಳು ಪ್ರಾಥಮಿಕ ಹಂತದ ಸಭೆ ನಡೆಸಿಸಿದ್ದಾರೆ. ಸದ್ಯದಲ್ಲೇ ಪ್ರಕರಣಗಳು ವರ್ಗಾವಣೆ ಆಗಲಿವೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT