ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರು ಕೊಟ್ಟ ಅಧಿಕಾರ, ಸುಲಭದಲ್ಲಿ ಹೋಗದು: ಕುಮಾರಸ್ವಾಮಿ

Last Updated 25 ಜೂನ್ 2018, 15:13 IST
ಅಕ್ಷರ ಗಾತ್ರ

ಬೆಂಗಳೂರು:ಇದು ದೇವರು ಕೊಟ್ಟಿರುವ ಅಧಿಕಾರ. ಅಷ್ಟು ಸುಲಭವಾಗಿ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಕಾಸಿಯಾ(ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ) ಶ್ರೇಷ್ಠತೆ ಮತ್ತು ನಾವೀನ್ಯತೆ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ರೈತರ ಸಾಲ ಮನ್ನಾ ಮಾಡಿದರೆ ಕಮಿಷನ್ ಸಿಗುವುದಿಲ್ಲ. ಆದರೆ, ನಾನು ಪಲಾಯನ ಮಾಡುವುದಿಲ್ಲ. ಸಾಲಮನ್ನ ಮಾಡುತ್ತೇನೆ. ಇದರಿಂದ ರೈತರ ಆತ್ಮಹತ್ಯೆ ನಿಲ್ಲುತ್ತದೆ ಎನ್ನುವ ನಂಬಿಕೆ ಇಲ್ಲ. ಆತ್ಮಹತ್ಯೆ ಯಾವ ಯಾವ ಕಾರಣಕ್ಕೆ ಆಗುತ್ತಿದೆ ಎನ್ನುವ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಹೇಳಿದರು.

ಒಂದೊಂದೆ ಸಮಸ್ಯೆಯನ್ನು ಬಗೆಹರಿಸುತ್ತೇನೆ. ಈಗಾಗಲೇಘೋಷಣೆ ಮಾಡಿರುವಂತೆ5ನೇ ತಾರೀಕು ಬಜೆಟ್ ಮಂಡನೆ ಮಾಡುತ್ತೇನೆ.ಆಗಲೇ ಎಲ್ಲರಿಗೂ ಉತ್ತರ ಸಿಗುತ್ತದೆ ಎಂದರು.

ನನ್ನ ಸವಾಲು ಬಹಳ ದೊಡ್ಡ ಮಟ್ಟದ್ದು ಇದೆ. ಎಲ್ಲಾ ಕೆಲಸಗಳನ್ನು ಮಾಡಿದ ನಂತರ ಶಬ್ಬಾಸ್ ಗಿರಿ. ನನ್ನ ಕನಸುಗಳು ನನಸಾದ ದಿನ ಮೈಸೂರು ಪೇಟ ಧರಿಸುತ್ತೇನೆ ಎಂದು ಹೇಳಿದರು.

ಹಣದ ದಾಹ ಇರುವವರಿಂದ ನಾವು ಎಡುವುತ್ತಿದ್ದೇವೆ. ಯಾವುದೇ ಅಧಿಕಾರಿಗಳು ನನಗೆ ಹಣ ಕೊಡುವ ಅಗತ್ಯವಿಲ್ಲ. ಹಾಗಾಗಿ ಪ್ರಾಮಾಣಿಕವಾಗಿ ನಡೆದುಕೊಳ್ಳಿ. ಕಾನೂನು ಬಾಹಿರವಾಗಿ ನಡೆಯುತ್ತಿರುವ ಕೆಲಸಗಳನ್ನು ಎಲ್ಲರೂ ಸೇರಿ ತಡೆಯಬೇಕು ಎಂದರು.

ಬೆಂಗಳೂರುಕೇಂದ್ರಿಕೃತವಾಗಿರುವ ಕೈಗಾರಿಕೆಗಳನ್ನು ಎರಡನೇ ದರ್ಜೆ ನಗರಗಳಿಗೆ ತೆಗೆದುಕೊಂಡು ಹೋಗುವ ಆಲೋಚನೆ ಇದೆ.

ರಾಜಕಾರಣಿಗಳು ಅಧಿಕಾರಿಗಳನ್ನು ಕಡೆಸುತ್ತಾರೆ. ನಾವು ಸರಿ ಇದ್ದರೆ ಅವರೂ ಸರಿಯಾಗುತ್ತಾರೆ. ಉತ್ತಮ ಅಧಿಕಾರಿಗಳು ಇದ್ದಾರೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕುಟುಂಬದ ರೀತಿಯಲ್ಲಿ ಇರಬೇಕು. ಒಳ್ಳೆಯ ಅಧಿಕಾರಿಗಳನ್ನು ಮೂರು ನಾಲ್ಕು ತಿಂಗಳಿಗೆ ವರ್ಗಾವಣೆ ಮಾಡುವುದಿಲ್ಲ. ಉತ್ತಮ ಸರ್ಕಾರದ ರಚಿಸಲು ಎಲ್ಲರೂ ನೆರವು ನೀಡಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT