ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ ಪ್ರಕರಣಗಳಿಂದ ನೇಮಕಾತಿ ವಿಳಂಬ: ಸಿ.ಎಂ ಸಿದ್ದರಾಮಯ್ಯ

Published 8 ಡಿಸೆಂಬರ್ 2023, 15:25 IST
Last Updated 8 ಡಿಸೆಂಬರ್ 2023, 15:25 IST
ಅಕ್ಷರ ಗಾತ್ರ

ವಿಧಾನ ಪರಿಷತ್‌(ಬೆಳಗಾವಿ): ಅಧಿಕ ಸಂಖ್ಯೆಯ ಅಭ್ಯರ್ಥಿಗಳು ಕೋರ್ಟ್‌ ಮೊರೆ ಹೋಗುತ್ತಿರುವುದರಿಂದ ಕರ್ನಾಟಕ ಲೋಕಸೇವಾ ಆಯೋಗದ ಪ್ರತಿ ನೇಮಕಾತಿಯೂ ವಿಳಂಬವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿಯ ಎನ್‌.ರವಿಕುಮಾರ್, ಶಶೀಲ್‌ ನಮೋಶಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮುಖ್ಯಮಂತ್ರಿ, ಅಂಗವಿಕಲ ಅಭ್ಯರ್ಥಿಗಳ  ವೈದ್ಯಕೀಯ ತಪಾಸಣೆ, ಎಲ್ಲ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ, ಹಲವು ಹುದ್ದೆಗಳಿಗೆ ಒಬ್ಬರೇ ಆಯ್ಕೆಯಾದ ಪ್ರಕರಣಗಳೂ ಆಯ್ಕೆಯ  ವಿಳಂಬಕ್ಕೆ ಇತರೆ ಕಾರಣಗಳು ಎಂದು ವಿವರಿಸಿದ್ದಾರೆ.

ನೇಮಕಾತಿ ಪ್ರಕ್ರಿಯೆಯಲ್ಲಿನ ವಿಳಂಬ ತಪ್ಪಿಸಲು ಲೋಕಸೇವಾ ಆಯೋಗದ ಅಧಿಕಾರಿಗಳು, ಸದಸ್ಯರು ಹೆಚ್ಚುವರಿ ಸಮಯ ಹಾಗೂ ರಜಾ ದಿನಗಳಲ್ಲೂ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT