ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಕ್ತಮಠ, ಶಿವಾನಂದಪ್ಪಗೆ ‘ಸಿಎನ್ಆರ್ ರಾವ್’ ಪ್ರಶಸ್ತಿ ಪ್ರದಾನ

ವಿಜ್ಞಾನ ಕ್ಷೇತ್ರದ ಹಲವು ಸಾಧಕರಿಗೆ 2022ನೇ ಸಾಲಿನ ಗೌರವ ಫೆಲೋಶಿಪ್ ಪ್ರದಾನ
Last Updated 2 ಆಗಸ್ಟ್ 2022, 20:45 IST
ಅಕ್ಷರ ಗಾತ್ರ

ಬೆಂಗಳೂರು: ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಿ.ಎ. ವಿರಕ್ತ ಮಠ ಮತ್ತು ಬಿ. ಶಿವಾನಂದಪ್ಪ ಅವರಿಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 2022ನೇ ಸಾಲಿನ ‘ಸಿ.ಎನ್.ಆರ್. ರಾವ್ ಜೀವಮಾನ ಸಾಧನೆ’ ಪ್ರಶಸ್ತಿಯನ್ನು ಮಂಗಳವಾರ ಪ್ರದಾನ ಮಾಡಲಾಯಿತು.

ಪ್ರೊ.ಕೆ.ವಿ. ರಾವ್ ಮತ್ತು ಡಾ.ನಾ. ಸೋಮೇಶ್ವರ ಅವರಿಗೆ ವಿಜ್ಞಾನ ಸಂವಹನೆಗಾಗಿ ಅಕಾಡೆಮಿ ವತಿಯಿಂದ ಕೊಡ ಮಾಡುವ ಜೀವಮಾನ ಪುರಸ್ಕಾರ
ನೀಡಲಾಯಿತು.

ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಐಟಿ- ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಅಕಾಡೆಮಿ ಪ್ರಶಸ್ತಿ ಮತ್ತು ಫೆಲೋಶಿಪ್‌ಗಳನ್ನು ಪ್ರದಾನ‌ ಮಾಡಿದರು.

ಗೌರವ ಫೆಲೋಶಿಪ್ ಪಡೆದವರು: ಸಿಎಲ್ಎಲ್ ಗೌಡ, ಡಿ.ಜೆ. ಭಾಗ್ಯರಾಜ್, ಸಿ.ಎಸ್. ಪ್ರಸಾದ್, ಎಸ್.ಎಸ್. ಹೊನ್ನಪ್ಪಗೋಳ್, ಲಲಿತ ಆರ್. ಗೌಡ, ಕೆ.ಎಂ. ಶಂಕರ್, ಬಿ. ತಿಮ್ಮೇಗೌಡ, ಮನೋಹರ ಕುಲಕರ್ಣಿ, ಬಾಲಸುಬ್ರಮಣಿಯನ್, ಟಿ.ವಿ. ರಾಮಚಂದ್ರ, ಎಸ್.ವಿಶ್ವನಾಥ್, ನವಕಾಂತ್ ಭಟ್, ಎ. ಆದಿಮೂರ್ತಿ, ಜಿ.ಡಿ. ವೀರಪ್ಪಗೌಡ, ಎ.ವಿ. ಕುರುಪದ್, ಆರ್.ಆರ್. ನವಲಗುಂದ, ಎ.ಕೆ. ಸೂದ್, ಎಸ್.ಪಿ. ದಂಡಿನ್, ಆರ್. ಉಮಾಶಂಕರ್, ಎಚ್. ಸುದರ್ಶನ್, ಎಚ್. ರಾಮಕೃಷ್ಣರಾವ್ ಮತ್ತು ಶ್ರೀದೇವಿ ಸಿಂಗ್.

ಫೆಲೋಶಿಪ್ ಪುರಸ್ಕೃತರು: ಅಬ್ರಹಾಂ ವರ್ಗೀಸ್, ಕೆ.ಎಂ. ಇಂದಿರೇಶ, ಎನ್.ಕೆ.ಎಸ್. ಗೌಡ, ಎಸ್.ಆರ್. ರಮೇಶ್, ಬಿ. ರಂಗಸ್ವಾಮಿ, ಕೆ. ವೆಂಕಟರಾಮನ್, ಎಚ್. ರೇವಣ್ಣ ಸಿದ್ದಪ್ಪ, ಎಸ್.ಜಿ. ಶ್ರೀಕಂಠೇಶ್ವರ ಸ್ವಾಮಿ, ಎಂ.ಬಿ. ರಜನಿ, ಎಂ.ಜೆಡ್. ಸಿದ್ದಿಕಿ, ಕೆ.ಎನ್.ಬಿ. ಮೂರ್ತಿ, ಕೆ.ಎಂ. ರೂಪಾ, ಎನ್.ಬಿ. ನಡುವಿನಮನಿ, ಅರುಣ್ ಇನಾಮ್ದಾರ್, ಸುಪರ್ಣ ರಾಯ್, ಜಿ. ಜಗದೀಶ್, ಎಂ.ಕೆ. ರಬಿನಾಯ್, ಕೆ.ಎನ್. ಅಮೃತೇಶ್, ರವಿಶಂಕರ್ ರೈ, ಕೃಷ್ಣ ಇಸಲೂರು, ವಿಶಾಲ್ ರಾವ್, ವಿಜಯಲಕ್ಷ್ಮಿ ಡೇಗಾ ಮತ್ತು ಜಗದೀಶ್ ಆರ್. ತೋನಣ್ಣನವರ್.

ಈ ವೇಳೆ ಮಾತನಾಡಿದ ಅಶ್ವತ್ಥ ನಾರಾಯಣ, ‘ರಾಜ್ಯವು ಸಂಶೋಧನೆ ಮತ್ತು ನಾವಿನ್ಯತೆಯಲ್ಲಿ ಇಡೀ ದೇಶಕ್ಕೆ ಪ್ರಥಮ ಸ್ಥಾನದಲ್ಲಿದೆ. ಇದನ್ನು ಬೇರೆ ರಾಜ್ಯಗಳಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಸಂಶೋಧನೆ ಮತ್ತು ನಾವೀನ್ಯತೆಗೆ ಸರ್ಕಾರ ಸಾಕಷ್ಟು ಉತ್ತೇಜನ ನೀಡುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT