ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಕಗೆ 13, ಕಿರಣ್‍ಗೆ 9 ಚಿನ್ನದ ಪದಕ

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ
Last Updated 27 ಏಪ್ರಿಲ್ 2022, 17:56 IST
ಅಕ್ಷರ ಗಾತ್ರ

ಬೀದರ್: ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವಗುರುವಾರ (ಏ.28) ನಡೆಯಲಿದ್ದು,ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕನಿಕ ಯಾದವ್ 13 ಹಾಗೂ ಬೆಂಗಳೂರು ಪಶು ಮಹಾವಿದ್ಯಾಲಯದ ವಿದ್ಯಾರ್ಥಿ ಕಿರಣ್ ದರೂರ್ ಒಂಬತ್ತು ಚಿನ್ನದ ಪದಕಗಳಿಗೆ ಕೊರಳೊಡ್ಡಲಿದ್ದಾರೆ.

2019-20ನೇ ಸಾಲಿನ ಬಿ.ವಿ.ಎಸ್ಸಿ ಮತ್ತು ಎ.ಎಚ್‌ನಲ್ಲಿ ಕನಿಕ 13, ಹಾಸನ ಪಶು ವೈದ್ಯಕೀಯ ಮಹಾವಿದ್ಯಾಲಯದ ನಿತಿನ್.ಬಿ ಆರು, 2020-21ನೇ ಸಾಲಿನ ಬಿ.ವಿ.ಎಸ್ಸಿ ಮತ್ತು ಎ.ಎಚ್‌ನಲ್ಲಿ ಕಿರಣ್ ದರೂರ್ ಒಂಬತ್ತು ಮತ್ತು ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯದ ರಜತ್ ಎಂ.ಎಸ್. ಆರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳಲಿದ್ದಾರೆ.

2019-20ನೇ ಸಾಲಿನ ಎಂ.ವಿ.ಎಸ್ಸಿಯಲ್ಲಿ ಬೆಂಗಳೂರು ಪಶು ವೈದ್ಯಕೀಯ ಮಹಾವಿದ್ಯಾಲಯದ ನಟರಾಜ ಡಿ. ಅವರು ನಾಲ್ಕು, 2020-21ನೇ ಸಾಲಿನ ಎಂ.ವಿ.ಎಸ್ಸಿಯಲ್ಲಿ ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯದ ಪವಿತ್ರ ಬಿ.ಎಸ್ ಹಾಗೂ ಎಂ.ಎಫ್.ಎಸ್ಸಿಯಲ್ಲಿ ಮಂಗಳೂರಿನ ಮೀನುಗಾರಿಕೆ ಮಹಾವಿದ್ಯಾಲಯದ ಧೀರಜ್ ಎಸ್.ಬಿ ತಲಾ ಮೂರು ಚಿನ್ನದ ಪದಕಗಳಿಗೆ
ಭಾಜನರಾಗಲಿದ್ದಾರೆ.

ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿರುವ ರಾಜ್ಯಪಾಲಥಾವರಚಂದ್‌ ಗೆಹಲೋತ್ ಅವರು ಘಟಿಕೋತ್ಸವದಲ್ಲಿ 2018- 19, 2019- 20 ಹಾಗೂ 2020- 21ನೇ ಸಾಲಿನ ಒಟ್ಟು 1,012 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ. 154 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ ಎಂದು ಕುಲಪತಿ ಡಾ. ಕೆ.ಸಿ. ವೀರಣ್ಣ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT