2020-21ನೇ ಸಾಲಿನ ವರ್ಗಾವಣೆ ಇದಾಗಿದ್ದು, ವಿಭಾಗದ ವ್ಯಾಪ್ತಿಯ ಹೊರಗೆ ವರ್ಗಾವಣೆಗೆ ಕೋರಿರುವ ಶಿಕ್ಷಕರಿಗೆ ಅನ್ವಯವಾಗಲಿದೆ. ಈ ಮೊದಲು ಡಿ.24ರಿಂದ ಜನವರಿ 10ರವರೆಗೆ ಕೌನ್ಸೆಲಿಂಗ್ ನಡೆಸಲು ಉದ್ದೇಶಿಸಲಾಗಿತ್ತು. ಮುಂದಿನ ಕೌನ್ಸೆಲಿಂಗ್ ದಿನಾಂಕಗಳನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.