ಬೆಂಗಳೂರು: ನ್ಯಾಯಾಲಯಗಳ ಕಲಾಪ ನೇರ ಪ್ರಸಾರ ಸಂಬಂಧ ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ಸೂಚನೆ ನೀಡಿದೆ.

‘ನಿಯಮ ರೂಪಿಸುವ ಪ್ರಕ್ರಿಯೆ ಹೈಕೋರ್ಟ್ ಸಮಿತಿ ಮುಂದೆ ಬಾಕಿ ಇದೆ’ ಎಂದು ಪೀಠಕ್ಕೆ ರಿಜಿಸ್ಟ್ರಾರ್ ಮಾಹಿತಿ ನೀಡಿದರು. ಮುಂದಿನ ವಿಚಾರಣೆ ವೇಳೆಗೆ ನಿಯಮ ಅಂತಿಮಗೊಳಿಸಿ ಮಾಹಿತಿ ಒದಗಿಸಬೇಕು ಎಂದು ಪೀಠ ತಿಳಿಸಿತು.

ನೇರ ಪ್ರಸಾರ ನಡೆಸುವ ಬಗ್ಗೆ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ 2018ರಲ್ಲಿ ತಿಳಿಸಿತ್ತು. 2021ರ ಮೇ ತಿಂಗಳಿನಲ್ಲಿ ಕೆಲ ಕಲಾಪಗಳ ನೇರ ಪ್ರಸಾರವನ್ನು ಪ್ರಾಯೋಗಿಕವಾಗಿ ಹೈಕೋರ್ಟ್ ಆರಂಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.