ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6.40 ಲಕ್ಷ ಸ್ವಯಂಸೇವಕರಿಗೆ ‘ಲರ್ನಿಂಗ್‌ ಆ್ಯಪ್‌’

Published 21 ಸೆಪ್ಟೆಂಬರ್ 2023, 15:40 IST
Last Updated 21 ಸೆಪ್ಟೆಂಬರ್ 2023, 15:40 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳು, ನಿರ್ದೇಶನಾಲಯಗಳಲ್ಲಿ ‘ಲರ್ನಿಂಗ್‌ ಆ್ಯಪ್‌’ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಎನ್‌ಎಸ್‌ಎಸ್‌ ಕೋಶ ಮತ್ತು ಡಾ.ರಾಜ್‌ಕುಮಾರ್ ಅಕಾಡೆಮಿ ಮಧ್ಯೆ ಗುರುವಾರ ಒಪ್ಪಂದ ಮಾಡಿಕೊಳ್ಳಲಾಯಿತು.

ಒಪ್ಪಂದದ ನಂತರ ಮಾತನಾಡಿದ ಸಚಿವ ಬಿ.ನಾಗೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಅಳವಡಿಸಿಕೊಂಡಿರುವ ರಾಜ್ಯದ 65 ವಿಶ್ವವಿದ್ಯಾಲಯಗಳು ಹಾಗೂ ನಾಲ್ಕು ನಿರ್ದೇಶನಾಲಯಗಳ ಸುಮಾರು 6.40 ಲಕ್ಷ ಸ್ವಯಂ ಸೇವಕರು ಸ್ಪರ್ಧಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಸಹಾಯವಾಗಲಿದೆ ಎಂದರು.

ಡಾ.ರಾಜ್‌ಕುಮಾರ್‌ ಅಕಾಡೆಮಿ ಮುಖ್ಯಸ್ಥ ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಗುರು ರಾಜ್‌ಕುಮಾರ್‌ ಮಾತನಾಡಿ, ‘ನಮ್ಮ ಕುಟುಂಬ ಅಕಾಡೆಮಿ ಮೂಲಕ ಬಡ ಮಕ್ಕಳು, ಪ್ರತಿಭಾವಂತರ ವಿದ್ಯಾವಿಕಾಸಕ್ಕೆ ಸಹಕಾರ ನೀಡುತ್ತಿದೆ. ಆನ್‌ಲೈನ್‌ ಮೂಲಕ ಸ್ಪರ್ಧಾ ಪರೀಕ್ಷೆಗಳಿಗೆ ತರಬೇತಿ ನೀಡಲು ಲರ್ನಿಂಗ್‌ ಆ್ಯಪ್‌ ಸಿದ್ಧಪಡಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT