ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಶೌಚಾಲಯ ನಿರ್ಮಾಣಕ್ಕೆ₹68.93 ಕೋಟಿ ಬಿಡುಗಡೆ

Published 26 ಫೆಬ್ರುವರಿ 2024, 15:53 IST
Last Updated 26 ಫೆಬ್ರುವರಿ 2024, 15:53 IST
ಅಕ್ಷರ ಗಾತ್ರ

ಬೆಂಗಳೂರು: ಶಾಲಾ ಶೌಚಾಲಯಗಳ ನಿರ್ಮಾಣಕ್ಕೆ ₹50 ಕೋಟಿ ಹಾಗೂ ನಿರ್ವಹಣೆಗೆ ₹18.93 ಕೋಟಿ ಅನುದಾನವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಿಡುಗಡೆ ಮಾಡಿದೆ. 

ಶಾಲಾ ಸ್ವಚ್ಛತೆ, ಕುಡಿಯುವ ನೀರಿಗೆ ನೀಡುವ ಮೊತ್ತವನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಮೂರುಪಟ್ಟು ಹೆಚ್ಚಿಸಲಾಗಿತ್ತು. 2022–23ನೇ ಸಾಲಿನವರೆಗೂ ಪ್ರತಿ ಶಾಲೆಗೆ ಕನಿಷ್ಠ ₹6,350ರಿಂದ ಗರಿಷ್ಠ ₹9 ಸಾವಿರ ನೀಡಲಾಗುತ್ತಿತ್ತು. ಇದರಲ್ಲೇ ಕುಡಿಯುವ ನೀರು ಹಾಗೂ ಶೌಚಾಲಯಗಳ ಸ್ವಚ್ಛತಾ ಕಾರ್ಯ ಮಾಡಬೇಕಿತ್ತು. ಪ್ರಸಕ್ತ ವರ್ಷದಲ್ಲಿ ಪ್ರತಿ ಶಾಲೆಗೆ  ₹20 ಸಾವಿರದಿಂದ ₹45 ಸಾವಿರ ನಿಗದಿ ಮಾಡಲಾಗಿದೆ. 2023–24ನೇ ಸಾಲಿನ ಕೊನೆಯ ಕಂತಿನ ಬಾಬ್ತು ₹18.93 ಕೋಟಿಯನ್ನು ಈಗ ಬಿಡುಗಡೆ ಮಾಡಲಾಗಿದೆ. 

ಖಾಸಗಿ ಶಾಲೆಗಳಿಗೆ ಬಾಕಿ ಇದ್ದ ಆರ್‌ಟಿಇ ಶುಲ್ಕ ₹96 ಕೋಟಿ ಸೇರಿದಂತೆ ವೇತನೇತರ ವೆಚ್ಚಗಳಿಗೆ ₹157 ಕೋಟಿ ಬಿಡುಗಡೆ ಮಾಡಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT