ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ವಿದ್ಯುತ್‌ ಶುಲ್ಕಕ್ಕೆ ಎಸ್‌ಎಸ್‌ಕೆ ಅನುದಾನ

Published 24 ಫೆಬ್ರುವರಿ 2024, 16:05 IST
Last Updated 24 ಫೆಬ್ರುವರಿ 2024, 16:05 IST
ಅಕ್ಷರ ಗಾತ್ರ

ಬೆಂಗಳೂರು: ಮಾರ್ಚ್‌–2024ರವರೆಗಿನ ವಿದ್ಯುತ್‌ ಮತ್ತು ನೀರಿನ ಶುಲ್ಕವನ್ನು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ (ಎಸ್‌ಎಸ್‌ಕೆ) ಅನುದಾನ ಬಳಸಿಕೊಂಡು ಭರಿಸಬೇಕು ಎಂದು ಸರ್ಕಾರಿ ಶಾಲಾ–ಕಾಲೇಜುಗಳಿಗೆ ಎಸ್‌ಎಸ್‌ಕೆ ನಿರ್ದೇಶಕರು ಸೂಚಿಸಿದ್ದಾರೆ.

ಸರ್ಕಾರಿ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಏ.1ರಿಂದ ಉಚಿತ ವಿದ್ಯುತ್‌ ಹಾಗೂ ನೀರು ಪೂರೈಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈಗಾಗಲೇ ಆದೇಶ ಹೊರಡಿಸಿದೆ. 2024–25ನೇ ಸಾಲಿನಿಂದ ಸರಬರಾಜು ಮಾಡುವ ವಿದ್ಯುತ್‌ ಹಾಗೂ ನೀರಿಗೆ ಬೇಕಾಗುವ ವಾರ್ಷಿಕ ವೆಚ್ಚದ ಪ್ರಸ್ತಾವವನ್ನು ಇಂಧನ ಹಾಗೂ ನಗರಾಭಿವೃದ್ಧಿ ಇಲಾಖೆಗಳೇ ನೇರವಾಗಿ ಆರ್ಥಿಕ ಇಲಾಖೆಗೆ ಸಲ್ಲಿಸಿ, ಅಗತ್ಯ ಅನುದಾನ ಪಡೆಯಲಿವೆ.

2023–24ನೇ ಶೈಕ್ಷಣಿಕ ಸಾಲಿನ ಮಾರ್ಚ್‌ವರೆಗಿನ ವಿದ್ಯುತ್‌ ಹಾಗೂ ನೀರಿನ ಶುಲ್ಕ ಪಾವತಿಗಾಗಿ ಅಗತ್ಯವಿರುವ ಜಿಲ್ಲಾವಾರು ಅನುದಾನದ ಪ್ರಸ್ತಾವವನ್ನು ಪ್ರಾಥಮಿಕ–ಪ್ರೌಢ ಶಾಲೆಗಳು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಹಾಗೂ ಪದವಿಪೂರ್ವ ಕಾಲೇಜುಗಳು ಇಲಾಖೆಯ ನಿರ್ದೇಶಕರಿಗೆ ಸಲ್ಲಿಸಬೇಕು ಎಂದು ಮೊದಲು ಸೂಚಿಸಲಾಗಿತ್ತು. ಈಗ ಎಸ್‌ಎಸ್‌ಕೆ ಅನುದಾನದಲ್ಲೇ ಬಳಸಿಕೊಳ್ಳುವಂತೆ ಸುತ್ತೋಲೆ ಹೊರಡಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT