ಬೆಂಗಳೂರು: ವಿಪ್ರೊ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್ಜಿ ಮತ್ತು ಅವರ ಟ್ರಸ್ಟ್ವಿರುದ್ಧ ತನಿಖೆ ನಡೆಸುವಂತೆ ಕೋರಿ ಹಲವು ಸುಳ್ಳು ಮೊಕದ್ದಮೆ ಹೂಡಿದ್ದ ಚೆನ್ನೈನ ಸರ್ಕಾರೇತರ ಸಂಸ್ಥೆ, ’ಇಂಡಿಯಾ ಅವೇಕ್ ಫಾರ್ ಟ್ರಾನ್ಸಪರೆನ್ಸಿ ಸಂಸ್ಥೆ‘ ಪ್ರತಿನಿಧಿಸುತ್ತಿದ್ದ ಚೆನ್ನೈನ ವಕೀಲರಾದ ಆರ್.ಸುಬ್ರಮಣಿಯನ್ ಮತ್ತು ಪಿ.ಸದಾನಂದ ಅವರಿಗೆ ರಾಜ್ಯ ಹೈಕೋರ್ಟ್ ಎರಡು ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ ತಲಾ ₹ 2 ಸಾವಿರ ದಂಡ ವಿಧಿಸಿದೆ.