ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಪೂಜೆಗೆ ವಿರೋಧ ಸರಿಯಲ್ಲ: ಪ್ರಮೋದ್ ಮುತಾಲಿಕ್

Published 5 ನವೆಂಬರ್ 2023, 23:29 IST
Last Updated 5 ನವೆಂಬರ್ 2023, 23:29 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಗಣಪತಿ ಪೂಜೆ, ಪ್ರಾರ್ಥನೆ ಮೌಢ್ಯದ ಆಚರಣೆ ಎಂಬ ಹೇಳಿಕೆ, ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರಿಗೆ ಶೋಭೆ ತರುವುದಿಲ್ಲ’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

‘ಪಂಡಿತಾರಾಧ್ಯರ ಬಗ್ಗೆ ಅಪಾರ ಗೌರವವಿದೆ. ನಾಟಕ, ಉತ್ಸವದ ಮೂಲಕ ಸಾಮಾಜಿಕವಾಗಿ ದೊಡ್ಡ ಕ್ರಾಂತಿ ಮಾಡಿದ ಮಠ ಅದು. ಅವರು ಈ ರೀತಿಯ ಸಣ್ಣ ಹೇಳಿಕೆ ನೀಡಿರುವುದು ಸರಿಯಲ್ಲ’ ಎಂದು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಶುಭ ಕಾರ್ಯಗಳಲ್ಲಿ ಮೊದಲಿಗೆ ಗಣೇಶನ ಪೂಜೆ ಮಾಡಿದರೆ ಒಳ್ಳೆಯದು ಎಂದು ಜನ ನಂಬಿದ್ದಾರೆ. ಗಣೇಶನ ತಂದೆ ಶಿವನ ಪೂಜೆ ಮಾಡುತ್ತೀರಾ. ಗಣೇಶ ಏಕೆ ಬೇಡ, ನಿಮ್ಮ ತರ್ಕ ಏನು’ ಎಂದು ಪ್ರಶ್ನಿಸಿದರು.

‘ವಚನಗಳನ್ನು ಹೇಳಬೇಕು, ಉಳಿಸಬೇಕು ಎಂಬುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಗಣೇಶನ ಪೂಜೆ ವಿರೋಧಿಸುವುದು ಸಂವಿ ಧಾನ ವಿರೋಧಿಯಾಗುತ್ತದೆ. ಈ ಹೇಳಿಕೆಯನ್ನು ಶ್ರೀಗಳು ಹಿಂಪಡೆಯಬೇಕು’ ಎಂದು ಆಗ್ರಹಿಸಿದರು. 

‘ರಾಜ್ಯದಲ್ಲಿರುವುದು ಹಿಂದೂ ಗಳನ್ನು ದ್ವೇಷಿಸುವ ಸರ್ಕಾರ. ಹುಲಿ ಉಗುರು ವಿಚಾರದಲ್ಲಿ ನೋಟಿಸ್ ನೀಡದೆ ಅರ್ಚಕರನ್ನು ಬಂಧಿಸಲಾಗಿದೆ. ಬಾಬಾಬುಡನಗಿರಿ ಸ್ವಾಮಿ ದರ್ಗಾದ ಶಾ ಖಾದ್ರಿ ಮನೆಯಲ್ಲಿ ಚಿರತೆ ಚರ್ಮ ಸಿಕ್ಕಿದ್ದರೂ ಬಂಧನ ಆಗಿಲ್ಲ. ಈ ರೀತಿಯ ನಾಟಕ ಸಹಿಸುವಂಥದ್ದಲ್ಲ. ಇದು ಬಹಳ ದಿನ ನಡೆಯುವುದಿಲ್ಲ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT