ಬೆಂಗಳೂರು: ‘ಭಾರತವು ವಿಶ್ವದಲ್ಲಿಯೇ ಮೂರನೇ ಅತ್ಯಂತ ದೊಡ್ಡ ಆರ್ಥಿಕತೆಯಾಗುತ್ತಿದೆ. ಸಾಂಸ್ಕೃತಿಕವಾಗಿ ಮುಂಚೂಣಿಯಲ್ಲಿದೆ. ಆದರೆ ಕರ್ನಾಟಕದ ಸ್ಥಿತಿ ಮಾತ್ರ ಇದಕ್ಕೆ ವಿರುದ್ಧವಾಗಿದೆ. ಇಲ್ಲಿ ಆಡಳಿತವೇ ಇಲ್ಲದಂತಾಗಿದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.

ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನವು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಭಾಗವಾಗಿ ನಗರದಲ್ಲಿ ಗುರುವಾರ ಆಯೋಜಿಸಿದ್ದ, ‘ಅಟಲ್ ಪುರಸ್ಕಾರ’ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಹಿಂದೆ ಉತ್ತಮ ಆಡಳಿತ ನೀಡುವಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿತ್ತು. ಈಗ ಆ ಸ್ಥಾನವನ್ನು ಕಳೆದುಕೊಂಡಿದೆ. ರಾಜ್ಯದಲ್ಲಿ ಶಿಕ್ಷಣ, ಕೃಷಿ, ಆರೋಗ್ಯ ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ. ಸರ್ಕಾರದ ಯಾವೊಂದು ಇಲಾಖೆಯಲ್ಲೂ ಉತ್ತಮ ಆಡಳಿತ ಇಲ್ಲ’ ಎಂದು ದೂರಿದರು.

‘ಬೆಂಗಳೂರು ನಗರದ ಮೂಲಸೌಕರ್ಯದ ಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಯಾರಾದರೂ ಸಲಹೆ ನೀಡಿದರೆ, ದುರಹಂಕಾರದಿಂದ ತಿರಸ್ಕರಿಸುತ್ತಾರೆ. ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ಕುರಿತಾಗಿ ತುಚ್ಛವಾಗಿ ಮಾತನಾಡುತ್ತಾರೆ. ಅಂತಹವರಿಂದ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಗಾಂಧೀಜಿ ಅವರು ರಾಮರಾಜ್ಯ ಮತ್ತು ಸ್ವರಾಜ್ಯದ ಪರಿಕಲ್ಪನೆ ನೀಡಿದ್ದರು. ಸ್ವಾತಂತ್ರ್ಯ ಬಂದ ನಂತರ ಭಾರತದಲ್ಲಿ ಸ್ವರಾಜ್ಯವಷ್ಟೇ ಇದ್ದಿತು, ಸುರಾಜ್ಯ ಇರಲಿಲ್ಲ. ಅದನ್ನು ತಂದ ಶ್ರೇಯ ವಾಜಪೇಯಿ ಅವರಿಗೆ ಸಲ್ಲುತ್ತದೆ. ಜನರಿಗೆ ಉತ್ತಮ ಆಡಳಿತ ನೀಡಬೇಕು ಎಂಬುದಕ್ಕೆ ಅವರು ಬದ್ಧವಾಗಿದ್ದರು’ ಎಂದರು.

‘ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದಾಗ ಶಿಕ್ಷಣದಲ್ಲಿ ಕಾಂತ್ರಿಕಾರಕ ಬದಲಾವಣೆ ತಂದಿದ್ದೆವು. ನಾವು ಆರಂಭಿಸಿದ ವಿಶ್ವವಿದ್ಯಾಲಯಗಳಿಂದ ತಳ ಸಮುದಾಯದ ಮಕ್ಕಳು ಡಾಕ್ಟರೇಟ್ ಪದವಿ ಪಡೆಯುತ್ತಿದ್ದಾರೆ. ಆದರೆ ಅಂತಹ ಶಿಕ್ಷಣ ಸಂಸ್ಥೆಗಳಿಗೆ ಈ ಸರ್ಕಾರ ಬಿಡಿಗಾಸೂ ನೀಡುತ್ತಿಲ್ಲ’ ಎಂದು ಆರೋಪಿಸಿದರು.

‘ಆಳುವವರು ಆಳುವ ಕೆಲಸವನ್ನಷ್ಟೇ ಮಾಡಬೇಕು. ಆಡಳಿತ ನಡೆಸುವವರು ಅವರ ಕೆಲಸ ಮಾಡಿದರಷ್ಟೇ ಸಾಕು. ಆದರೆ ರಾಜ್ಯದಲ್ಲಿ ಈಗ ಸ್ಥಿತಿ ಬದಲಾಗಿದೆ. ಆಡಳಿತ ನಡೆಸುವ ಅಧಿಕಾರಿಗಳು ಆಳುವವರ ಕೆಲಸ ಮಾಡುತ್ತಿದ್ದಾರೆ. ಆಳುವವರು ಅಧಿಕಾರಿಗಳನ್ನು ಎಲ್ಲಿಗೆ ಹಾಕಬೇಕು ಎಂಬುದನ್ನಷ್ಟೇ ಯೋಚಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ಆಡಳಿತದಲ್ಲಿ ಏನೂ ಸರಿ ಇಲ್ಲ’ ಎಂದರು.

‘ಕಾಂಗ್ರೆಸ್ನಿಂದಲೂ ಮತಕಳವು’

‘ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 10000 ದಿಂದ 15000 ಕಳ್ಳ ಮತದಾರರನ್ನು ಸೇರಿಸಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು ‘ಕಾಂಗ್ರೆಸ್ ಮತಕಳವು ನಡೆಸಿದೆ. ಆದರೆ ಬಿಜೆಪಿ ವಿರುದ್ಧ ಮತಕಳವು ಆರೋಪ ಮಾಡಿ ಕಳಂಕ ಹಚ್ಚುವ ಹುನ್ನಾರ ನಡೆಸಿದೆ. ಇದು ಹೆಚ್ಚು ದಿನ ನಡೆಯುವುದಿಲ್ಲ. ಜನರು ಈ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಿಂದ ಅಧಿಕಾರ ಹಿಡಿಯಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.